ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ಸೇರದ ಗಿಫ್ಟ್ ಕಾರ್ಡ್: ಶಾಸಕ ಹುಸೇನ್‌ಗೆ ಯುವಕ ಪ್ರಶ್ನೆ

Published 25 ಜನವರಿ 2024, 16:04 IST
Last Updated 25 ಜನವರಿ 2024, 16:04 IST
ಅಕ್ಷರ ಗಾತ್ರ

ರಾಮನಗರ: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಶಾಸಕ ಎಚ್‌.ಎ. ಇಕ್ಬಾಲ್ ಹುಸೇನ್ ಅವರು ಹಂಚಿದ್ದ ಗಿಫ್ಟ್ ಕಾರ್ಡ್‌ ನನಗಿನ್ನೂ ತಲುಪಿಲ್ಲವೆಂದು, ಯುವಕನೊಬ್ಬ ಶಾಸಕರನ್ನು ಪ್ರಶ್ನಿಸಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಲ್ಲೂಕಿನ ಹುಲಿಕೆರೆ ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಮಿ ಪೂಜೆ ನೆರವೇರಿಸಲು ಹುಸೇನ್ ಅವರು ಇತ್ತೀಚೆಗೆ ತೆರಳಿದ್ದರು. ಆಗ ಸ್ಥಳೀಯ ಯುವಕ, ‘ಚುನಾವಣೆಯಲ್ಲಿ ಗೆಲ್ಲಲ್ಲಿ, ಸೋಲಲಿ ಎರಡ್ಮೂರು ದಿನದಲ್ಲಿ ನಿಮಗೆ ಗಿಫ್ಟ್ ಕಾರ್ಡ್ ಕೊಡುತ್ತೇನೆ ಎಂದು ನಮ್ಮೂರಿಗೆ ಬಂದಾಗ ಭರವಸೆ ಕೊಟ್ಟಿದ್ರಿ. ಅದನ್ನು ನಂಬಿ ನಾವು ನಿಮಗೆ ವೋಟು ಹಾಕಿದ್ದೆವು. ಚುನಾವಣೆ ಮುಗಿದು ನೀವು ಗೆದ್ದರೂ, ಇನ್ನೂ ಕಾರ್ಡ್ ಕೈ ಸೇರಿಲ್ಲ. ಯಾವಾಗ ಕೊಡುತ್ತೀರಿ’ ಎಂದು ಪ್ರಶ್ನಿಸಿದ್ದಾನೆ.

ಈ ವೇಳೆ ಸ್ಥಳದಲ್ಲಿದ್ದ ಪಕ್ಷದ ಮುಖಂಡರು, ಮಾತನಾಡದಂತೆ ಯುವಕನನ್ನು ತಡೆಯಲು ಮುಂದಾಗಿದ್ದಾರೆ. ಆದರೂ, ಬಿಡದೆ ಪ್ರಶ್ನಿಸಿದ ಯುವಕನಿಗೆ ಪ್ರತಿಕ್ರಿಯಿಸಿದ ಹುಸೇನ್, ‘ಕ್ಷೇತ್ರದಾದ್ಯಂತ ಗಿಫ್ಟ್‌ ಕಾರ್ಡ್ ಕೊಟ್ಟಿದ್ದೇನೆ. ಇನ್ನೊಂದು ವಾರ ಅಥವಾ ಹದಿನೈದು ದಿನದಲ್ಲಿ ನಿನಗೆ ಕಾರ್ಡ್ ತಲುಪಿಸಲಾಗುವುದು’ ಎಂದು ಸಮಾಧಾನ ಮಾಡಿದ್ದಾರೆ.

ಈ ವಿಡಿಯೊ ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ ವಿಡಿಯೊ ಹರಿದಾಡುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಗಿಫ್ಟ್‌ ಕಾರ್ಡ್ ಹಂಚಿಕೆ ವಿಷಯವು ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT