ಬುಧವಾರ, ನವೆಂಬರ್ 13, 2019
23 °C

ಗ್ರಾಮೀಣ ಸಾಕ್ಷರತಾ ನೋಂದಣಿ ದಿನ

Published:
Updated:

ಸೂಲಿಬೆಲೆ: ಸೆ. 5ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಧಾನ ಮಂತ್ರಿ ಗ್ರಾಮೀಣ ಸಾಕ್ಷರತಾ ಕಾರ್ಯಕ್ರಮವನ್ನು ರಾಷ್ಟ್ರೀಯ ಲಾಗಿನ್ ದಿನವಾಗಿ ದೇಶದಾದ್ಯಂತ, ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಚರಿಸಲಾಯಿತು ಎಂದು ಸಿ.ಎಸ್.ಸಿ. ಜಿಲ್ಲಾ ಸಂಯೋಜಕ ಪ್ರಜ್ವಲ್ ಹೇಳಿದರು.

ಸೂಲಿಬೆಲೆಯ ಶ್ರೀಮಾಧವ ಇನ್‌ಸ್ಟಿಟ್ಯೂಟ್‌ ಆಫ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆಯ ಸಿ.ಎಸ್.ಸಿ ಕೇಂದ್ರದಲ್ಲಿ, ಪ್ರಧಾನಮಂತ್ರಿ ಗ್ರಾಮೀಣ ಸಾಕ್ಷರತಾ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಈ ಯೋಜನೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು, ಅಂಗನವಾಡಿ ಕಾರ್ಯಕರ್ತರು ಹಾಗೂ 14 ವರ್ಷ ಮೇಲ್ಪಟ್ಟ ಎಲ್ಲ ಯುವಕ ಯುವತಿಯರು ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ’ ಎಂದರು.

ಜಿಲ್ಲಾ ವ್ಯವಸ್ಥಾಪಕ ಮಹೇಶ, ಮೃತ್ಯುಂಜಯ, ಶ್ರೀಮಾಧವ ಎಜುಕೇಷನ್ ಟ್ರಸ್ಟ್‌ನ ನಿರ್ದೇಶಕ ಮಹಾಂತ್ ಮಾತನಾಡಿದರು.

ತರಬೇತುದಾರರಾದ ತೇಜಸ್ವಿನಿ, ನಿರಂಜನ್, ನಾಗೇಶ್, ರಂಜಿತ, ಹರೀಶ್ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)