ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ: 11 ಮಂದಿ ಬಂಧನ

Published 25 ಜನವರಿ 2024, 6:52 IST
Last Updated 25 ಜನವರಿ 2024, 6:52 IST
ಅಕ್ಷರ ಗಾತ್ರ

ಕುದೂರು: ಜೂಜಾಟ ಆಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು 11 ಮಂದಿ ಜೂಜುಕೋರರನ್ನು ಬಂಧಿಸಿ, ನಗದು ವಶಪಡಿಸಿಕೊಂಡಿದ್ದಾರೆ.

ಹೋಬಳಿಯ ತಿಮ್ಮೇಗೌಡನಪಾಳ್ಯದ ಜಮೀನೊಂದರಲ್ಲಿ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ ಹಾಗೂ ತಂಡ ದಾಳಿ ನಡೆಸಿದರು.

ದಾಳಿಯ ವೇಳೆ ಕುದೂರಿನ ಉಮೇಶ, ನಾರಾಯಣ ಸಿಕ್ಕಿಬಿದ್ದಿದ್ದು, ಸಿದ್ದರಾಜು, ಗಿರೀಶ, ಹರೀಶ, ಪುಟ್ಟರಂಗ, ಪುಟ್ಟಣ್ಣ, ಹನುಮಂತಯ್ಯ, ಚಂದ್ರೇಗೌಡ, ಸುರೇಶ್, ಅಜ್ಜಹಳ್ಳಿಯ ಗಿರೀಶ ತಪ್ಪಿಸಿ ಕೊಂಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತರಿಂದ ಪೊಲೀಸರು ₹3,000, 5 ಬೈಕ್ ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT