ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಪಟ್ಟಣ | 'ಮಂಗಾಡಹಳ್ಳಿ ಎಂಪಿಸಿಎಸ್ ನೂತನ ಕಟ್ಟಡ ಉದ್ಘಾಟನೆ'

ಉದ್ಘಾಟನೆ
Published 24 ಜನವರಿ 2024, 7:30 IST
Last Updated 24 ಜನವರಿ 2024, 7:30 IST
ಅಕ್ಷರ ಗಾತ್ರ

ಚನ್ನಪಟ್ಟಣ: ಹೈನುಗಾರಿಕೆ ರೈತರಿಗೆ ವರದಾನ. ರೈತರು ಹೈನುಗಾರಿಕೆಯಲ್ಲಿ ಹೆಚ್ಚು ತೊಡಗಿಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಬಮೂಲ್ ನಿರ್ದೇಶಕ ಎಚ್.ಸಿ. ಜಯಮುತ್ತು ಸಲಹೆ ನೀಡಿದರು.

ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸಂಘದ ಸದಸ್ಯರು ಹಾಗೂ ಆಡಳಿತ ಮಂಡಳಿ ಶ್ರಮದಿಂದ ನೂತನ ಕಟ್ಟಡ ನಿರ್ಮಾಣವಾಗಿದೆ. ಇದರ ಸದ್ಬಳಕೆಯಾಗಬೇಕು ಎಂದರು.

ಸಂಘದ ಅಧ್ಯಕ್ಷ ಎಂ.ಬಿ.ಯತೀಶ್ ಕುಮಾರ್ ಮಾತನಾಡಿ, ಎಲ್ಲರ ಸಹಕಾರದಿಂದ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಾಣವಾಗಿದೆ. ಸದಸ್ಯರಿಗೆ ಇನ್ನೂ ಹೆಚ್ಚಿನ ಸವಲತ್ತು ಕಲ್ಪಿಸಿಕೊಡಲು ಸಹಕಾರಿಯಾಗಿದೆ ಎಂದರು.

ಬಮೂಲ್ ಕೃಷಿ ಅಧಿಕಾರಿ ಎಸ್.ಜಿತೇಂದ್ರಕುಮಾರ್, ವಿಸ್ತರಣಾಧಿಕಾರಿ ಹೊನ್ನಪ ಪೂಜಾರಿ, ಶ್ರೀಧರ್, ಸಂಘದ ಉಪಾಧ್ಯಕ್ಷ ಎಂ.ಇ. ನಂದೀಶ್, ನಿರ್ದೇಶಕ ಎಂ.ಕೃಷ್ಣ, ಚಿಕ್ಕರಾಜು, ಕೆ.ಜಯಪ್ರಕಾಶ್, ನಾಗರಾಜು, ಎಂ.ಟಿ.ಪ್ರಶಾಂತ್, ಎಸ್.ಎಂ ಮಾದಶೆಟ್ಟಿ, ತಿಮ್ಮಪ್ಪರಾಜು, ಪುಟ್ಟಲಿಂಗಮ್ಮ, ಸುಶೀಲಮ್ಮ, ಮುನಿಯಯ್ಯ, ಸಂಘದ ಸಿಇಒ ಎಂ.ಕಿರಣ್, ಸಿಬ್ಬಂದಿ, ಗ್ರಾಮದ ಮುಖಂಡರು ಭಾಗವಹಿಸಿದ್ದರು.

ಗ್ರಾಮದ ಹಿರಿಯರಾದ ಮಾದಯ್ಯ, ನಿಂಗೇಗೌಡ, ರಾಮಕೃಷ್ಣ, ಶಿವಲಿಂಗಯ್ಯ, ಪುಟ್ಟಯ್ಯ, ಸಿ.ಚನ್ನಪ್ಪ, ಶಿವಲಿಂಗಯ್ಯ, ಎಂ.ಎಸ್.ಶಂಕರಯ್ಯ, ಹೊಂಬಾಳಯ್ಯ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT