ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಸಹಾಯವಾಣಿ ಸಂಖ್ಯೆ: ಮೋಸ ಹೋದ ವರ್ತಕ

Published 25 ನವೆಂಬರ್ 2023, 8:59 IST
Last Updated 25 ನವೆಂಬರ್ 2023, 8:59 IST
ಅಕ್ಷರ ಗಾತ್ರ

ಕನಕಪುರ: ಇ–ಪೇ ಯುಪಿಐ ಆ್ಯಪ್‌ ಗ್ರಾಹಕರ ಸಹಾಯವಾಣಿ ಹೆಸರಲ್ಲಿ ಚಿಲ್ಲರೆ ಅಂಗಡಿ ವ್ಯಾಪಾರಿಗೆ ಆನ್‌ಲೈನ್‌ನಲ್ಲಿ ₹50 ಸಾವಿರ ವಂಚಿಸಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕಸಬಾ ಹೋಬಳಿ ಆಡನಕುಪ್ಪೆ ಗ್ರಾಮದ ಆಕಾಶ್ ವಂಚನೆಗೊಳಗಾದವರು. ಇವರು ಆಡನಕುಪ್ಪೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಆನ್‌ಲೈನ್ ವಾಹಿವಾಟಿಗಾಗಿ ಅಂಗಡಿಯಲ್ಲಿ ಇ–ಪೇ ಯುಪಿಐ ಆ್ಯಪ್‌ ಬಳಸುತ್ತಿದ್ದರು.

ಆದರೆ ಇ–ಪೇ ಯುಪಿಐ ಆ್ಯಪ್‌ ಮೂಲಕ ಬರುತ್ತಿದ್ದ ಹಣ ತನ್ನ ಖಾತೆಗೆ ಜಮೆ ಆಗುತ್ತಿದೆಯೋ ಇಲ್ಲವೋ ಎಂಬ ಶಂಕೆ ಕಾಡುತ್ತಿತ್ತು. ವ್ಯಾಪಾರಕ್ಕೆ ಸಮಸ್ಯೆ ಆಗುತ್ತಿದ್ದು ಸರಿಪಡಿಸಿಕೊಳ್ಳಲು ಗೂಗಲ್‌ನಲ್ಲಿ ಹುಡುಕಾಡಿ ಇ– ಪೇ ಯುಪಿಐ ಗ್ರಾಹಕರ ಸಹಾಯವಾಣಿ ನಂಬರ್ ಪಡೆದುಕೊಂಡಿದ್ದರು.

ಗೂಗಲ್‌ನಲ್ಲಿ ಸಿಕ್ಕ ನಕಲಿ ಇ-ಪೇ ಯುಪಿಐ ಗ್ರಾಹಕರ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಯುಪಿಐ ಆ್ಯಪ್‌ನಿಂದ ತನ್ನ ಖಾತೆಗೆ ಹಣ ಪಾವತಿಯಾಗುವ ಬಗ್ಗೆ ಮಾಹಿತಿ ತಿಳಿಯುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು.

ಸಮಸ್ಯೆ ಬಗೆಹರಿಸುವುದಾಗಿ ಆಕಾಶ್ ಅವರನ್ನು ನಂಬಿಸಿದ ವಂಚಕರು ಎಟಿಎಂ ಕಾರ್ಡ್ ಸಂಖ್ಯೆ ಮತ್ತು ಸಿವಿವಿ ಸಂಖ್ಯೆ ಒಟಿಪಿ ಪಡೆದು ವಂಚಿಸಿದ್ದಾರೆ.

ಬ್ಯಾಂಕ್‌ ಮಾಹಿತಿ, ಒಟಿಪಿ ಪಡೆಯುತ್ತಿದ್ದಂತೆ ಆಕಾಶ್ ಬ್ಯಾಂಕ್ ಖಾತೆಯಿಂದ ₹50 ಸಾವಿರ ಕಡಿತವಾದ ಮಾಹಿತಿ ಬಂದಿದೆ. ತಕ್ಷಣ ಗೂಗಲ್‌ ಮೂಲಕ ಪಡೆದ ಸಹಾಯವಾಣಿ ನಂಬರ್‌ಗೆ ಕರೆ ಮಾಡಿದಾಗ ಅದು ಸ್ವಿಚ್‌ ಆಫ್‌ ಆಗಿದೆ.

ತಕ್ಷಣ ಆಕಾಶ್‌ ಮೋಸಹೊಗಿರುವ ಬಗ್ಗೆ ಖಚಿತವಾಗಿ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT