ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾನತೆ ಸಾರಿದ ಸಂವಿಧಾನ

Published 24 ಫೆಬ್ರುವರಿ 2024, 7:02 IST
Last Updated 24 ಫೆಬ್ರುವರಿ 2024, 7:02 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲೂಕಿನ ಚೀಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬುಧವಾರ ನಡೆದ ಸಂವಿದಾನ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ತಹಸೀಲ್ದಾರ್ ವಿಜಿಯಣ್ಣ ಚಾಲನೆ ನೀಡಿದರು.

ಜಾಗೃತಿ ಜಾಥಾಕ್ಕೆ ಪೂರ್ಣಕುಂಭ ಸ್ವಾಗತ ಕೋರಿ ಕಲಾ ತಂಡಗಳ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.

‘ಸಂವಿಧಾನ ಯಾವುದೇ ಒಂದು ವರ್ಗ ಜಾತಿಗೆ ಸೀಮಿತವಲ್ಲ.ದೇಶದ ಎಲ್ಲರಿಗೂ ಸಮಾನತೆ ಕಲ್ಪಿಸುತ್ತದೆ’ ಎಂದು ವಿಜಿಯಣ್ಣ ಹೇಳಿದರು. 

ಸಂವಿಧಾನ ಜಾರಿಗೆ ಬಂದ ನಂತರ ದೇಶದ ಎಲ್ಲರ ಪರಿಸ್ಥಿತಿ ಸುಧಾರಿಸಿದೆ.ಸ್ವಾತಂತ್ರ, ಸಮಾನತೆ, ಬ್ರಾತೃತ್ವ, ಎಲ್ಲವೂ ಸಂವಿಧಾನದಲ್ಲಿ ಅಡಕವಾಗಿದೆ.ದೇಶದಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದೇವೆ ಎಂದು ಕೋಟೆ ಕುಮಾರ್ ಹೇಳಿದರು.

‘ನಮಗೆ ರಾಮ ಬೇಡ ಕೃಷ್ಣ ಬೇಡ. ಸಂವಿಧಾನ ಬೇಕು’ ಎಂದು ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ ಗೋವಿಂದಯ್ಯ  ಹೇಳಿದರು.

ಇಒ ಬೈರಪ್ಪ, ಗ್ರಾ.ಪಂ. ಅಧ್ಯಕ್ಷ ಸುಧಾ ನಾಗೇಶ್, ಪಿಡಿಒ ಮಹದೇವ್, ನೀಲಿ ರಮೇಶ್, ಗುರುಮೂರ್ತಿ, ಕುಮಾರ್, ಚಂದ್ರು, ಲಕ್ಷ್ಮಣ್, ಕಲಾವಿದರಾದ ಆಕಾಶ್ ವೆಂಕಿ, ಹೊಳಸಾಲಯ್ಯ ಹಾಜರಿದ್ದರು.

ಚೀಲೂರು ಗ್ರಾಮ ಪಂಚಾಯಿತಿ ನಡೆದ ಸಂವಿದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ 3 ವರ್ಷದ ಹರ್ಷವರ್ಧನ್ ಸಂವಿದಾನದ ಪೀಠಿಕೆ ಭೋದಿಸಿದರು
ಚೀಲೂರು ಗ್ರಾಮ ಪಂಚಾಯಿತಿ ನಡೆದ ಸಂವಿದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ 3 ವರ್ಷದ ಹರ್ಷವರ್ಧನ್ ಸಂವಿದಾನದ ಪೀಠಿಕೆ ಭೋದಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT