ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆಗೂಡು ಮಾರುಕಟ್ಟೆ: ಹೆಚ್ಚಿದ ವಹಿವಾಟು

Last Updated 3 ಏಪ್ರಿಲ್ 2020, 14:51 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಗೂಡು ಆವಕ ಪ್ರಮಾಣವು ಎರಡನೇ ದಿನಕ್ಕೆ ಏರಿಕೆ ಕಂಡಿದೆ.

ಲಾಕ್‌ಡೌನ್‌ ಆದೇಶದಿಂದಾಗಿ ಒಂದು ವಾರ ಕಾಲ ಬಂದ್ ಆಗಿದ್ದ ಗೂಡು ಮಾರುಕಟ್ಟೆಯು ಗುರುವಾರ ಬಾಗಿಲು ತೆರೆದಿತ್ತು. ಮೊದಲ ದಿನ 150 ಲಾಟ್‌ನಷ್ಟು ಗೂಡು ಬಂದಿತ್ತು. ಶುಕ್ರವಾರ ಈ ಪ್ರಮಾಣವು 370 ಲಾಟ್‌ಗಳಿಗೆ ಏರಿಕೆಯಾಯಿತು. 145 ಲಾಟ್‌ನಷ್ಟು ಮಿಶ್ರ ತಳಿಯ ಗೂಡು ಬಂದಿದ್ದು, 7652 ಕೆ.ಜಿ.ಯಷ್ಟು ಉತ್ಪನ್ನ ತೂಗಲಾಯಿತು. ಪ್ರತಿ ಕೆ.ಜಿ.ಗೆ ₹303ರ ಸರಾಸರಿಯಲ್ಲಿ ಮಾರಾಟ ನಡೆಯಿತು. ದ್ವಿತಳಿಯ (ಬೈವೋಲ್ಟನ್‌) ಗೂಡು 225 ಲಾಟ್‌ನಿಂದ 18,701 ಕೆ.ಜಿ.ಯಷ್ಟು ಆವಕ ಆಯಿತು. ಪ್ರತಿ ಕೆ.ಜಿ.ಗೆ ಸರಾಸರಿ ₹332ರ ದರದಲ್ಲಿ ಮಾರಾಟ ನಡೆಯಿತು. ಎರಡನೇ ದಿನವೂ ಗೂಡು ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ನಿಯಮವೂ ಪಾಲನೆ ಆಗಲಿಲ್ಲ.ರೀಲರ್‍ ಹಾಗೂ ರೈತರು ಹೆಚ್ಚಿನ ಸಂ‌ಖ್ಯೆಯಲ್ಲೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT