ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಸರ, ಮೊಬೈಲ್, ಹಣ ಕಿತ್ತುಕೊಂಡು ಪರಾರಿ

Published 22 ಮೇ 2024, 4:41 IST
Last Updated 22 ಮೇ 2024, 4:41 IST
ಅಕ್ಷರ ಗಾತ್ರ

ಬಿಡದಿ: ಇಲ್ಲಿನ ಕೆಂಚನಪುರ ಗ್ರಾಮದಲ್ಲಿ ಈಚೆಗೆ ರಸ್ತೆ ಪಕ್ಕ ಫೋನ್‌ನಲ್ಲಿ ಮಾತಾಡುತ್ತಿದ್ದ ವ್ಯಕ್ತಿಯನ್ನು ಮೂವರು ಅಪರಿಚಿತರು ಹೆದರಿಸಿ, ಎರಡು ಮೊಬೈಲ್, ಹಣ, ಚಿನ್ನದ ಸರವನ್ನು ಕಿತ್ತು ದರೋಡೆ ಮಾಡಿದ್ದಾರೆ.

ನವೀನ್ ಕುಮಾರ್ ಎಂಬುವರು ತಮ್ಮ‌ ದ್ವಿಚಕ್ರ ವಾಹನದಲ್ಲಿ ಕೆಂಚನಪುರ ಗ್ರಾಮದ ಬಳಿ ಇರುವ ಆಭಯ ಆಂಜನೇಯ ದೇವಾಲಯಕ್ಕೆ ಶುಕ್ರವಾರ ಬಂದಿದ್ದಾರೆ. ದೇವಾಲಯದಲ್ಲಿ ಪೂಜೆ ಮುಗಿಸಿ ಅಲ್ಲೆ ಪಕ್ಕದಲ್ಲಿದ್ದ ಲೇಔಟ್ ಬಳಿ ಫೋನ್‌ನಲ್ಲಿ ಮಾತನಾಡುತ್ತಿರುವಾಗ ಮೂವರು ಅಪರಿಚಿತರು ಬಂದು ನವೀನ್‌ಗೆ ಹೆದರಿಸಿ ಎರಡು ಮೊಬೈಲ್, 15 ಗ್ರಾಂ ತೂಕದ ಚಿನ್ನದ ಸರ ಹಾಗೂ ಪರ್ಸ್‌ನ್ಲಲಿದ್ದ ₹ 2 ಸಾವಿರಹಾಗೂ ಪೋನ್ ಪೇ ಮೂಲಕ₹  4,500 ಹಾಕಿಸಿಕೊಂಡು ಓಡಿ ಹೋಗಿದ್ದಾರೆ.

ಈ‌ ಸಂಬಂಧ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ ಭಾನುವಾರ ನವೀನ್ ಕುಮಾರ್ ದೂರು ದಾಖಲು ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT