ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಾಕ್ಟರ್‌ ಪಲ್ಟಿ: ಬಾಲಕ ಸಾವು

Published 10 ಜೂನ್ 2024, 4:28 IST
Last Updated 10 ಜೂನ್ 2024, 4:28 IST
ಅಕ್ಷರ ಗಾತ್ರ

ಕನಕಪುರ: ಜಮೀನು ಉಳುಮೆ ಮಾಡುವಾಗ ಟ್ರಾಕ್ಟರ್‌ ಪಲ್ಟಿಯಾಗಿದ್ದರಿಂದ ಬಾಲಕ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಅರಳಗಡಕಲು ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಕೋಡಿಹಳ್ಳಿ ಹೋಬಳಿಯ ಬಿಜ್ಜಳ್ಳಿ ಗ್ರಾಮದ ಸ್ವಾಮಿ ಅವರ ಪುತ್ರ ಚಂದನ್‌ (10) ಮೃತ ಬಾಲಕ.

ಕೋಡಿಹಳ್ಳಿ ಹಿಪ್ಪೋಕ್ಯಾಂಪಸ್‌ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಚಂದನ್, ಶನಿವಾರ ತಾಯಿಯ ಮನೆ ಅರಳಗಡಕಲು ಗ್ರಾಮಕ್ಕೆ ಬಂದಿದ್ದ. ಅವರ ಜಮೀನಿನಲ್ಲಿ ಚಂದ್ರು ಎಂಬುವರು ಟ್ರಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದರು. ಆಗ ಬಾಲಕ ಸಹ ಟ್ರಾಕ್ಟರ್ ಏರಿ ಕುಳಿತಿದ್ದ. ಉಳುಮೆ ಮಾಡುವಾಗ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಟ್ರಾಕ್ಟರ್ ಪಲ್ಟಿಯಾಗಿದೆ. ಆಗ ಟ್ರಾಕ್ಟರ್ ತಳದಲ್ಲಿ ಸಿಲುಕಿದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಚಂದ್ರು ಜಿಗಿದಿದ್ದರಿಂದ ಪಾರಾಗಿದ್ದಾರೆ. 

ಘಟನೆ ಕುರಿತು ಟ್ರಾಕ್ಟರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು ಎಂದು ಕೋಡಿಹಳ್ಳಿ ಠಾಣೆ ಪೊಲೀಸರು ತಿಳಿಸಿದರು. ಅಂತ್ಯಕ್ರಿಯೆ ಬಿಜ್ಜಳ್ಳಿಯಲ್ಲಿ ಭಾನುವಾರ ನೆರವೇರಿತು.

ಮೃತ ಬಾಲಕ ಚಂದನ್‌
ಮೃತ ಬಾಲಕ ಚಂದನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT