ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೌಚಾಲಯ ನಿರ್ಮಾಣಕ್ಕೆ ಗ್ರಾಮೀಣರು ಆದ್ಯತೆ ನೀಡಲಿ’

Last Updated 26 ಮೇ 2017, 10:25 IST
ಅಕ್ಷರ ಗಾತ್ರ

ಚನ್ನಪಟ್ಟಣ: ‘ಗ್ರಾಮೀಣ ಪ್ರದೇಶದ ಜನರು ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಿಸಿಕೊಂಡು ಬಯಲು ಮುಕ್ತ ಶೌಚಾಲಯದ ವ್ಯವಸ್ಥೆಗೆ ಮುಂದಾಗಬೇಕು’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್ ಸಲಹೆ ಅವರು ನೀಡಿದರು.

ಪಟ್ಟಣದ ಗುರುಕೃಪಾ ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ತಾಲ್ಲೂಕಿನಲ್ಲಿರುವ ಧರ್ಮಸ್ಥಳ ಯೋಜನೆ ಒಕ್ಕೂಟಗಳ ಅಧ್ಯಕ್ಷರ ವಿಶೇಷ ಮಾಹಿತಿ ಸಭೆಯಲ್ಲಿ ಮಾತನಾಡಿದ ಅವರು, ಇಂದಿಗೂ ಗ್ರಾಮೀಣ ಪ್ರದೇಶದ ಜನರು ಬಯಲು ಶೌಚಾಲಯ ಅವಲಂಬಿಸಿರುವುದು ವಿಷಾದನೀಯ ಎಂದರು.

ಒಕ್ಕೂಟದ ಅಧ್ಯಕ್ಷರ ಜವಾಬ್ದಾರಿ, ತಂಡಗಳ ನಿರ್ವಹಣೆ, ಗ್ರೇಡಿಂಗ್, ಹಾಜರಾತಿ, ಒಕ್ಕೂಟದ ಬಲವರ್ಧನೆ, ಯೋಜನೆಯಿಂದ ಸಿಗುವಂತಹ ಕೃಷಿ ಅನುದಾನ, ಸೋಲಾರ್ ದೀಪಗಳ ಆಳವಡಿಕೆ, ಕೃಷಿ ಕಾರ್ಯಕ್ರಮ, ಸಮುದಾಯ ಅಭಿವೃದ್ಧಿ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.

ತಾಲ್ಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಮಾತನಾಡಿ, ಚನ್ನಪಟ್ಟಣ ತಾಲ್ಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ನಡೆಸಲಾದ ಯೋಜನೆಯ ಕಾರ್ಯಕ್ರಮಗಳ ಅನುಷ್ಠಾನದ ವರದಿ ಮಂಡಿಸಿದರು.

ರಾಮನಗರ ಜಿಲ್ಲಾ ಲೀಡ್ ಬ್ಯಾಂಕಿನ ಸಾಕ್ಷರತಾ ಮಾಹಿತಿ ಅಧಿಕಾರಿ ಶೋಭಾ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಬ್ಯಾಂಕುಗಳೊಂದಿಗೆ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಸಭೆಯಲ್ಲಿ ವಲಯದ ಮೇಲ್ವಿಚಾರಕರು, 54 ಒಕ್ಕೂಟದ ಅಧ್ಯಕ್ಷರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT