ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರ ಸ್ವಾಭಿಮಾನದ ಬದುಕಿಗೆ ಆಧಾರ

ಫಲಾನುಭವಿಗಳಿಗೆ ಉಚಿತ ಸಾಧನ, ಸಲಕರಣೆ ವಿತರಣೆ
Published 10 ಮಾರ್ಚ್ 2024, 15:55 IST
Last Updated 10 ಮಾರ್ಚ್ 2024, 15:55 IST
ಅಕ್ಷರ ಗಾತ್ರ

ಶಿವಮೊಗ್ಗ: ಅಂಗವಿಕಲರು ಮತ್ತು ಹಿರಿಯ ನಾಗರೀಕರು ಸ್ವಾಭಿಮಾನದಿಂದ ಬದುಕು ನಡೆಸಲು ವಿವಿಧ ಯೋಜನೆಗಳ ಮೂಲಕ ಕೇಂದ್ರ ಸರ್ಕಾರ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ಬೆಂಗಳೂರು ಆರ್ಟಿಫಿಷಿಯಲ್ ಲಿಂಬ್ಸ್ ಮ್ಯಾನುಫಾಕ್ಚರಿಂಗ್ ಕಾರ್ಪೋರೇಷನ್ ಆಫ್ ಇಂಡಿಯಾ (ಅಲಿಂಕೋ) ವತಿಯಿಂದ ಇಲ್ಲಿನ ರಂಗಾಯಣದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಅಂಗವಿಕಲರು ಹಾಗೂ ಹಿರಿಯ ನಾಗರೀಕರಿಗೆ ಗಾಲಿ ಕುರ್ಚಿ ವಿತರಿಸಿ ಮಾತನಾಡಿದರು.

ಯೋಜನೆಯಡಿ ಜಿಲ್ಲೆಯಲ್ಲಿ ತಾಲ್ಲೂಕುವಾರು ಸಮೀಕ್ಷೆ ನಡೆಸಿ ಅಂಗವಿಕಲ ಫಲಾನುಭವಿಗಳ ಪಟ್ಟಿ ಸಿದ್ದಪಡಿಸಲಾಗಿದೆ. ಇಲ್ಲಿ ಸುಮಾರು 1,020 ಅಂಗವಿಕಲರಿಗೆ ₹80 ಲಕ್ಷ ಮೊತ್ತದ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು.

ಅಡಿಪ್‌ (ಅಸಿಸ್ಟಂಟ್ಸ್ ಟು ಡಿಸೇಬಲ್‌ ಪರ್ಸನ್ಸ್) ಯೋಜನೆಯಡಿ ಅಂಗವಿಕಲರು ಹಾಗೂ ಹಿರಿಯ ನಾಗರೀಕರು ಸೇರಿ 500 ಫಲಾನುಭವಿಗಳಿಗೆ ಟ್ರೈಸಿಕಲ್‌, ವ್ಹೀಲ್‌ಚೇರ್‌, ಕ್ರಚಸ್‌, ನಡಿಗೆ ಕೋಲು, ದ್ವಿಚಕ್ರ ವಾಹನ, ಎಂ. ಆರ್.ಕಿಟ್‌ (ಬುದ್ದಿಮಾಂದ್ಯ ಮಕ್ಕಳ ಬೋಧನಾ ಸಾಮಗ್ರಿ) ಗಳನ್ನು ಹಂಚಲಾಗುತ್ತಿದ್ದು, 32 ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ ಎಂದರು.

ಅಂಗವಿಕಲರಿಗೆ ಯುಡಿ ಐಡಿ ಕಾರ್ಡ್, ನಿರಾಮಯ ಆರೋಗ್ಯ ಯೋಜನೆ, ವಿದ್ಯಾರ್ಥಿವೇತನ, ಸಾಮಾಜಿಕ ಭದ್ರತೆಯ ಭತ್ಯೆ ಸೇರಿ ₹5 ಲಕ್ಷವರೆಗೆ ವೈದ್ಯಕೀಯ ವೆಚ್ಚ ಕೇಂದ್ರ ಸರ್ಕಾರ ನೀಡುತ್ತಿದೆ ಎಂದರು.

ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರ ಅನುದಾನದಲ್ಲಿ ಅಂಗವಿಕಲರಿಗೆ ಟ್ರೈಸೈಕಲ್, ಹಾಗೂ ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ವಿತರಿಸಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ ಮಾತನಾಡಿ, ಇದೊಂದು ವಿಶೇಷ ಕಾರ್ಯಕ್ರಮ. ಕೇಂದ್ರ ಸರ್ಕಾರ 26 ರೀತಿಯ ದಿವ್ಯಾಂಗರನ್ನು ಗುರುತಿಸಿ ಅವರ ಜೀವನ ಸುಗಮಗೊಳಿಸಲು ಸಾಧನ ಸಲಕರಣೆಗಳನ್ನು ವಿತರಿಸುತ್ತಿದೆ. ಅಂಗವಿಕಲರಲ್ಲಿ ಅದ್ಭುತ ಶಕ್ತಿ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಶಿವಕುಮಾರ್, ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಬಿ.ಕೃಷ್ಣಪ್ಪ, ಮಹಾನಗರ ಪಾಲಿಕೆ ಮಾಜಿ ಮೇಯರ್ ಎಸ್.ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT