ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣ ತತ್ವ ವಿಚಾರ ಅಳವಡಿಸಿಕೊಳ್ಳಿ: ಮಾತೆ ಶರಣಾಂಬಿಕೆ

Published 10 ಮೇ 2024, 16:20 IST
Last Updated 10 ಮೇ 2024, 16:20 IST
ಅಕ್ಷರ ಗಾತ್ರ

ಶಿಕಾರಿಪುರ: ‘ಬಸವಣ್ಣನ ತತ್ವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಬಸವಾಶ್ರಮ ಮಾತೆ ಶರಣಾಂಬಿಕೆ ಸಲಹೆ ನೀಡಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಶುಕ್ರವಾರ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಆಯೋಜಿಸಿದ್ದ ಬಸವೇಶ್ವರರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವಣ್ಣ ವಚನಗಳ ಮೂಲಕ ಕ್ರಾಂತಿ ಮಾಡಿದರು. ವಚನಗಳ ಮೂಲಕ ನಾಡಿನ ಜನರಿಗೆ ಉತ್ತಮ ಸಂದೇಶ ನೀಡಿದರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿ ಹಲವು ಶರಣರು ನುಡಿದಂತೆ ನಡೆದಿದ್ದರು. ಸಮಾಜದಲ್ಲಿದ್ದ ಮೌಢ್ಯ ಹಾಗೂ ಕಂದಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಜನರನ್ನು ಜಾಗೃತಗೊಳಿಸಿದ್ದರು. ಈ ತಾಲ್ಲೂಕು ಅಲ್ಲಮಪ್ರಭು, ಅಕ್ಕಮಹಾದೇವಿ, ಸತ್ಯಕ್ಕ ಸೇರಿ ಹಲವು ಶರಣ ಶರಣೆಯರಿಗೆ ಜನ್ಮ ನೀಡಿರುವುದು ಹೆಮ್ಮೆ ಪಡುವ ವಿಷಯವಾಗಿದೆ’ ಎಂದರು.

ವೀರಶೈವ ಮಹಾಸಭಾ ಪದಾಧಿಕಾರಿಗಳು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ವಿ. ಈರೇಶ್ ಅಧ್ಯಕ್ಷತೆ ವಹಿಸಿದ್ದರು.

ಪುರಸಭೆ ಮುಖ್ಯಾಧಿಕಾರಿ ಭರತ್, ಉಪ ತಹಶೀಲ್ದಾರ್ ರವಿಕುಮಾರ್, ಮುಖಂಡರಾದ ಬಿ.ಡಿ. ಭೂಕಾಂತ್, ಕಾಂಚನಾ ಕುಮಾರ್, ಕೆ.ಪಿ. ಅಶ್ವಿನ್, ಸುಭಾಷ್ ಚಂದ್ರಸ್ಥಾನಿಕ್, ಶಂಭು, ಅಂಗಡಿ ಜಗದೀಶ್, ಕುಮಾರಸ್ವಾಮಿ ಹಿರೇಮಠ, ಜಗದೀಶ್ ಬಡಕಳ್ಳಿ, ಮಂಜಾಚಾರ್, ಕೊಟ್ರೇಶಪ್ಪ, ಬೇಗೂರು ಶಿವಪ್ಪ, ಪ್ಯಾಟೆ ಈರಪ್ಪ, ಜಯಣ್ಣ, ಪಿ. ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT