ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿವಮೊಗ್ಗ: ಜನರ ಮಧ್ಯದಿಂದ ವೇದಿಕೆಗೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ

Published 18 ಮಾರ್ಚ್ 2024, 10:12 IST
Last Updated 18 ಮಾರ್ಚ್ 2024, 10:12 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಅಲ್ಲಮಪ್ರಭು ಮೈದಾನದಲ್ಲಿ (ಫ್ರೀಡಂ ಪಾರ್ಕ್) ಸೋಮವಾರ ಜನರ ಗುಂಪಿನ ಮಧ್ಯದಿಂದ ತೆರೆದ ವಾಹನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಬೀಸುತ್ತಾ ಮುಖ್ಯವೇದಿಕೆಗೆ ಬಂದು ಹೊಸ ಸಂಪ್ರದಾಯಕ್ಲೆ ನಾಂದಿ ಹಾಡಿದರು.

ನರೇಂದ್ರ ಮೋದಿ ಅಕ್ಕಪಕ್ಕದಲ್ಲಿ ನಿಂತು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ ಜನರಿಗೆ ನಮಸ್ಕರಿಸಿದರು.

ಈ ವೇಳೆ ಬಿಜೆಪಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಗುಣಗಾನ ಮಾಡುವ ಡಿ.ಜೆ ಸಂಗೀತದ ಅಬ್ಬರ ಸಭೆಯಲ್ಲಿ ಅನುರಣಿಸಿತು. ಪ್ರಧಾನ ವೇದಿಕೆಯ ಹಿಂಬದಿಯ ಪರದೆಯಲ್ಲಿ ಮೋದಿ ಸಾಧನೆಗಳ ಕುರಿತಾದ ವಿಡಿಯೊ ಪ್ರದರ್ಶನಗೊಂಡಿತು.

ಸಭೆಯಲ್ಲಿ ನೆರೆದ ಭಾರೀ ಸಂಖ್ಯೆಯ ಬಿಜೆಪಿ ಬೆಂಬಲಿಗರು ಕೇಸರಿ ಶಾಲು, ಟೋಪಿ ಬೀಸಿ ಜಯಘೋಷದ ಮೂಲಕ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT