ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೆಸ್ ಟ್ರಸ್ಟ್: ಶಿವರಾಜ್ ಕುಮಾರ್ ಚಿತ್ರಗಳ ಗಾಯನ

Published 12 ಜುಲೈ 2023, 16:30 IST
Last Updated 12 ಜುಲೈ 2023, 16:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 61ನೇ ಜನ್ಮದಿನಾಚರಣೆ ಅಂಗವಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಗಾಯನ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರು ಶಿವರಾಜ್ ಕುಮಾರ್‌ ನಟನೆಯ ಚಿತ್ರಗಳ‌ ಹಾಡುಗಳನ್ನು ಹಾಡಿ ನೆರದಿದ್ದ ಪ್ರೇಕ್ಷಕರನ್ನು ರಂಜಿಸಿದರು.

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಹಿರಿಯ ಕಲಾವಿದರು ಸಂಗೀತ ಕ್ಷೇತ್ರಕ್ಕೆ‌ ಅಪಾರ ಕೊಡುಗೆ ನೀಡಿದ್ದಾರೆ ಅವರನ್ನು ಸ್ಮರಿಸುವುದು ನಮ್ಮ‌ ಕರ್ತವ್ಯ’ ಎಂದರು.

‘ಕಲಾವಿದರ ಕೊಡುಗೆಯನ್ನು ಸ್ಮರಿಸುವ ಸಲುವಾಗಿ ಶಿವಮೊಗ್ಗ ಪ್ರೆಸ್ ಟ್ರಸ್ಟ್, ನಗರದಲ್ಲಿ ವಿಭಿನ್ನ ಕಾರ್ಯಕ್ರ‌ಮಕ್ಕೆ ನಾಂದಿ ಹಾಡಿದೆ. ಮುಂದೆ ಇದೇ ರೀತಿ ಪ್ರತಿ ನಟ-ನಟಿಯರು, ಸಂಗೀತಗಾರರು ಹಾಗೂ ಸಿ.ಅಶ್ವತ್ಥ್‌ ಅವರಂತಹ ಹಿನ್ನೆಲೆ ಗಾಯಕರ ಜನ್ಮದಿನಾಚರಣೆಯಂದು ವಿಭಿನ್ನ ಕಾರ್ಯಕ್ರಮ ಆಚರಿಸಲಾಗುವುದು’ ಎಂದು ಹೇಳಿದರು.

‘ಡಾ.ಶಿವರಾಜ್ ಕುಮಾರ್ ಉತ್ತಮ ಕಲಾವಿದ. ಅವರ ತಂದೆ ಡಾ.ರಾಜ್ ಕುಮಾರ್ ಅವರು ನಟನೆ ಮೂಲಕವೇ ಕೋಟ್ಯಂತರ ಜನರ ಮನಸ್ಸು ಗೆದ್ದವರು. ಅವರ ಮಗ ಶಿವಣ್ಣ ಕೂಡಾ ಚಿತ್ರರಂಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರೆಸ್ ಟ್ರಸ್ಟ್ ಖಜಾಂಚಿ ಜೇಸುದಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT