ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದೈಹಿಕ ನ್ಯೂನತೆ ಹೊಂದಿರುವವರ ಪ್ರೋತ್ಸಾಹಿಸಿ

ಶ್ರೀಮದ್ ವಿದ್ಯಾಧೀಶ ತೀರ್ಥ ವಡೇರ್ ಸ್ವಾಮೀಜಿ
Published 15 ಫೆಬ್ರುವರಿ 2024, 13:58 IST
Last Updated 15 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ಭದ್ರಾವತಿ: ‘ದೇವರು ಪ್ರತಿಯೊಬ್ಬರಿಗೂ ಒಂದು ವಿಶೇಷ ಶಕ್ತಿ ಕೊಟ್ಟಿರುತ್ತಾನೆ. ಅಂತಹ ಶಕ್ತಿ ಹೊಂದಿರುವವರನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ದೈಹಿಕ ನ್ಯೂನತೆ ಇರುವವರನ್ನು ಮಾನವೀಯತೆಯಿಂದ ಕಾಣಬೇಕು’ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೊತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ತಿಳಿಸಿದರು.

ನಗರದ ನ್ಯೂಟೌನ್‌ನಲ್ಲಿರುವ ಶಿವಭದ್ರಾ ಟ್ರಸ್ಟ್ ವತಿಯಿಂದ ತರಂಗ ಕಿವುಡ ಮಕ್ಕಳ ಹಿರಿಯ ಮತ್ತು ಪ್ರಾಥಮಿಕ ಶಾಲೆಗೆ ಈಚೆಗೆ ಭೇಟಿ ನೀಡಿ, ನಂತರ ಶುಗರ್ ಟೌನ್ ಲಯನ್ಸ್ ಕ್ಲಬ್‌ನ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇತರರು ತೊಂದರೆಯಲ್ಲಿ ಇದ್ದರೆ ಅವರಿಗೆ ಕಿಂಚಿತ್ತಾದರೂ ಸಹಾಯ ಮಾಡುವ ಮೂಲಕ ಸಮಾಜದ ಋಣ ತೀರಿಸಬೇಕು. ಈ ಶಾಲೆಯಲ್ಲಿರುವ ಮಕ್ಕಳಿಗೆ ಕಿವಿ ಕೇಳಿಸದಿರಬಹುದು, ಮಾತನಾಡಲು ಬಾರದಿರಬಹುದು. ಆದರೆ, ಸಾಮಾನ್ಯ ಜನರು ಮಾಡುವ ಸಾಧನೆ ಮುಂದೊಂದು ದಿನ ಈ ಮಕ್ಕಳು ಸಹ ಸಮಾಜದ ಎಲ್ಲರ ಕಿವಿಗೆ ಕೇಳಿಸಿ, ಅವರ ಬಾಯಲ್ಲಿ ಇವರ ಸಾಧನೆ ಮಾತಾಡುವಂತಾಗುತ್ತದೆ. ಸಾಮಾನ್ಯ ಮಕ್ಕಳ ಪ್ರತಿಭೆಯೊಂದಿಗೆ ನೀವು ಸಹ ಸ್ಪರ್ಧಿಸುವಂತಾಗಲಿ’ ಎಂದು ಹಾರೈಸಿದರು.

ಸುಜಾತಾ, ಗೀತಾ ಪ್ರಾರ್ಥನೆ ಮಾಡಿದರು. ಶೈಲಾ ಅಮೃತವಚನ ವಾಚಿಸಿದರು. ತಾರಾಮಣಿ ಸ್ವಾಗತಿಸಿದರು. ಎಂ.ಜಿ. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾಮ ಕಥಾನಕ ನೃತ್ಯ ಪ್ರದರ್ಶನ ಮಾಡಿದ್ದು ವಿಶೇಷ ಮೆಚ್ಚುಗೆಗೆ ಪಾತ್ರವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT