ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಸಿಬ್ಬಂದಿಯ ಹರತಾಳ: ‘ಬುತ್ತಿಗಂಟು’ ತಂದ ವಿದ್ಯಾರ್ಥಿಗಳು

Published 1 ಫೆಬ್ರುವರಿ 2024, 13:58 IST
Last Updated 1 ಫೆಬ್ರುವರಿ 2024, 13:58 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಪಟ್ಟಣ ಸೇರಿದ ಸುತ್ತಮುತ್ತಲ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳು ಗುರುವಾರ ಮಧ್ಯಾಹ್ನ ಬಿಸಿಯೂಟದ ಬದಲು ಮನೆಯಿಂದ ತಂದಿದ್ದ ಊಟವನ್ನು ಸವಿದರು.

ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಶಾಲೆಗಳ ಬಿಸಿಯೂಟ ತಯಾರಕ ಸಿಬ್ಬಂದಿ ಗುರುವಾರ ಒಂದು ದಿನದ ಸಾಂಕೇತಿಕ ಮುಷ್ಕರ ಹಮ್ಮಿಕೊಂಡಿದ್ದರು. ಆದ್ದರಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಮನೆಯಿಂದಲೇ ಡಬ್ಬಿ ತಂದು ಮನೆಯೂಟ ಸವಿದರು.

ಪ್ರತಿದಿನ ಸರತಿ ಸಾಲಿನಲ್ಲಿ ಬಿಸಿಯೂಟ ಪಡೆಯುತ್ತಿದ್ದ ಮಕ್ಕಳು ಗುರುವಾರ ಮನೆಯಲ್ಲಿ ಮಾಡಿದ್ದ ತರಹೇವಾರಿ ತಿಂಡಿಗಳನ್ನು ತಂಡು ಸ್ನೇಹಿತರೊಂದಿಗೆ ಹಂಚಿಕೊಂಡು ತಿಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT