ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನವಟ್ಟಿ | ಮಕ್ಕಳ ಸಂತೆ: ಗಮನ ಸೆಳೆದ ಕುರಿ, ಕೋಳಿ ವ್ಯಾಪಾರ

Published 5 ಫೆಬ್ರುವರಿ 2024, 14:43 IST
Last Updated 5 ಫೆಬ್ರುವರಿ 2024, 14:43 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಈಚೆಗೆ ನಡೆದ ಮಕ್ಕಳ ಸಂತೆ ಗಮನ ಸೆಳೆಯಿತು. 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳು, ಪಾಲಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು ಕುರಿ, ಕೋಳಿಗಳನ್ನು ಸಂತೆಗೆ ತಂದು ವ್ಯಾಪಾರ ಮಾಡಿದರು. ಒಂದು ಕೋಳಿಗೆ ₹ 200 ಎಂದು ಕೂಗುತ್ತಾ ಚೌಕಾಸಿ ಮಾಡುತ್ತಿದ್ದುದು ಗಮನ ಸೆಳೆಯಿತು. ಮಿರ್ಚಿ, ಮಂಡಕ್ಕಿ, ಚಹಾದ ಹೊಟೇಲ್‌ ತೆರೆಯಲಾಗಿತ್ತು. ಪಾಲಕರು ಟೀ ಕುಡಿದು. ಮಿರ್ಚಿ ತಿಂದು ಮಕ್ಕಳನ್ನು ಪ್ರೋತ್ಸಾಹಿಸಿದರು.

ಎಸ್‌ಡಿಎಂಸಿ ಸದಸ್ಯರು ಮತ್ತು ಶಿಕ್ಷಕರು ತರಕಾರಿ ಖರೀದಿಸಿ ಮಕ್ಕಳ ಉತ್ಸಾಹ ಹೆಚ್ಚಿಸಿದರು.

ಸಿಆರ್‌ಪಿ ರಾಜು ಗಂಜೇರ್, ಮುಖ್ಯಶಿಕ್ಷಕಿ ಸುಶೀಲಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಧನಂಜಯ, ಮಾಜಿ ಅಧ್ಯಕ್ಷೆ ಶೋಭಾ ಮಂಜಣ್ಣ ಅರಳಿಕಟ್ಟೆ, ಸಹ ಶಿಕ್ಷಕರಾದ ನಾಗರತ್ನಮ್ಮ, ರೇಖಾ, ಲತಾ, ಅಕ್ಷತಾ, ಸಾವಕ್ಕ, ವಿನಯ್, ಪ್ರತಿಮಾ ಭಾಗವಹಿಸಿದ್ದರು.

ಆನವಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು
ಆನವಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳ ಸಂತೆ ನಡೆಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT