ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕಾರಿಪುರ | ‘ಪರಿಣಾಮಕಾರಿ ಬೋಧನೆಗೆ ಆದ್ಯತೆ ನೀಡಿ’

Published 6 ಡಿಸೆಂಬರ್ 2023, 13:54 IST
Last Updated 6 ಡಿಸೆಂಬರ್ 2023, 13:54 IST
ಅಕ್ಷರ ಗಾತ್ರ

ಶಿಕಾರಿಪುರ: ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಕಲಿಸಲು ಶಿಕ್ಷಕರು ಅದ್ಯತೆ ನೀಡಬೇಕು ಎಂದು ರಂಗಕರ್ಮಿ ಶಿರಾಳಕೊಪ್ಪ ಗುರುಪ್ರಸಾದ್ ಸಲಹೆ ನೀಡಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಐಕ್ಯೂಎಸಿ ಸಂಯೋಜಿತ ಮತ್ತು ಭಾಷಾ ಸಂಘ ಹಾಗೂ ಸಿರಿಯಾಳ ಕಲಾಕೇಂದ್ರ ಶಿರಾಳಕೊಪ್ಪ ಆಶ್ರಯದಲ್ಲಿ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ನಾಟಕ ಮತ್ತು ಕಲೆ ವಿಷಯ ಕುರಿತು ಮಂಗಳವಾರ ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಕರು ಜೀವನದಲ್ಲಿ ಸಾಮಾನ್ಯ ಜ್ಞಾನ ಹೊಂದಿರಬೇಕು. ಶಿಕ್ಷಣಕ್ಕೆ ಪೂರಕವಾಗಿ ನಾಟಕ ಮತ್ತು ಕಲೆ ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ವಿಷಯವನ್ನು ತಲುಪಿಸುವಲ್ಲಿ ಶಿಕ್ಷಕರಲ್ಲಿ ಧ್ವನಿ, ರಾಗ, ತಾಳ, ಲಯಬದ್ಧತೆ, ಪ್ರಾಸ ಇತ್ಯಾದಿ ರಂಗಭೂಮಿಯ ಮಜಲುಗಳು ಗೊತ್ತಿದ್ದಾಗ ಮಾತ್ರ ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಪಠ್ಯವನ್ನು ಮುಟ್ಟಿಸಬಲ್ಲರು ಎಂದರು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಪ್ರಾಂಶುಪಾಲ ಜಿ.ಎಸ್.ಶಿವಕುಮಾರ್, ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ನಮ್ಮಲ್ಲಿ ತಾಳ್ಮೆ, ಸಾಮಾನ್ಯ ಜ್ಞಾನ ಹಾಗೂ ನಾಯಕತ್ವ ಗುಣ ಬಹಳ ಮುಖ್ಯ. ಕಲೆಯು ಶಿಕ್ಷಕರಲ್ಲಿ, ವಿದ್ಯಾರ್ಥಿಗಳಲ್ಲಿ ಧನಾತ್ಮಕ ಮನೋಭಾವ ಮೂಡಿಸುವಲ್ಲಿ ಮಹತ್ವ ವಹಿಸುತ್ತದೆ ಎಂದರು.

ಕುಮದ್ವತಿ ಪ್ರಥಮ ದರ್ಜೆ ಕಾಲೇಜು ಜಿ.ಆರ್. ಹೆಗಡೆ, ಭಾಷಾ ಸಂಘದ ಮಾರ್ಗದರ್ಶಕರಾದ ಕಿರಣ್ ಕುಮಾರ್, ವೀರೇಂದ್ರ ಕುಮಾರ್ ವಾಲಿ, ರವಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT