ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ | ಗಣಪತಿ ಕೆರೆಗೆ ಕೊಳಚೆ ನೀರು ಹರಿವು: ಕ್ರಮಕ್ಕೆ ಒತ್ತಾಯಿಸಿ ಮನವಿ

Published 1 ಜೂನ್ 2024, 15:53 IST
Last Updated 1 ಜೂನ್ 2024, 15:53 IST
ಅಕ್ಷರ ಗಾತ್ರ

ಸಾಗರ: ಇತಿಹಾಸ ಪ್ರಸಿದ್ಧ ಗಣಪತಿ ಕೆರೆಗೆ ಕೊಳಚೆ ನೀರು ಹರಿಸುತ್ತಿರುವ, ಪ್ಲಾಸ್ಟಿಕ್ ತ್ಯಾಜ್ಯ ಎಸೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.

ಗಣಪತಿ ಕೆರೆ ಸಾಗರ ನಗರದ ತೆರೆದ ಬಾವಿಗಳಿಗೆ ನೀರು ಪೂರೈಸುವ ಪ್ರಮುಖ ಜಲಮೂಲವಾಗಿದೆ. ಈ ಕೆರೆಯ ಶುದ್ಧತೆ ಕಾಪಾಡಿಕೊಂಡು ಜಲಮೂಲವನ್ನು ರಕ್ಷಿಸುವುದು ಊರಿನ ಎಲ್ಲರ  ಕರ್ತವ್ಯವಾಗಿದೆ. ಆದರೆ, ಕೆಲವರು ಕೆರೆಗೆ ಕೊಳಚೆ ನೀರು ಹರಿಸುತ್ತಾರೆ. ಪ್ಲಾಸ್ಟಿಕ್ ಸೇರಿ ಇತರ ತ್ಯಾಜ್ಯಗಳನ್ನು ಎಸೆದು ಕೆರೆಯ ನೀರನ್ನು ಮಲೀನಗೊಳಿಸುತ್ತಿದ್ದಾರೆ ಎಂದು ಮನವಿಯಲ್ಲಿ ದೂರಿದ್ದಾರೆ.

ಕೆಲವು ಹೋಟೆಲ್‌ಗಳಿಂದ ಅಶುದ್ಧವಾದ ನೀರು ಗಣಪತಿ ಕೆರೆ ಸೇರುತ್ತಿದೆ. ಕೆರೆಯ ಎರಡೂ ದಡಗಳಲ್ಲಿ ಪ್ಲಾಸ್ಟಿಕ್ ಬಾಟಲ್, ಕವರ್ ಹಾಗೂ ಇತರ ತ್ಯಾಜ್ಯಗಳನ್ನು ತಂದು ಬಿಸಾಕುತ್ತಿದ್ದಾರೆ. ಕೆರೆಯ ಎರಡೂ ದಂಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಮುಖರಾದ ಡಿ.ಎಸ್.ಸುಧೀಂದ್ರ, ಕೋಮಲ್ ರಾಘವೇಂದ್ರ, ನಂದೀಶ್ ಸೂರಗುಪ್ಪೆ, ಶ್ರೀಧರ್, ರಾಘವೇಂದ್ರ ಕಾಮತ್, ಸಂತೋಷ್, ಮಂಜಣ್ಣ, ಉದಯಾದಿತ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT