ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಗ ತೋರುವ ಸುಸಜ್ಜಿತ ನಿಲ್ದಾಣ ಅಂಕಣಗಳು

ಸಕಲ ಸೌಕರ್ಯಗಳಿರುವ ಬಸ್‌ ನಿಲ್ದಾಣಗಳು
Last Updated 26 ಡಿಸೆಂಬರ್ 2016, 8:55 IST
ಅಕ್ಷರ ಗಾತ್ರ
ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಖಾಸಗಿ ಹಾಗೂ ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಅಳವಡಿಸಲಾ ಗಿರುವ ನಾಮಫಲಕಗಳು ಪ್ರಯಾಣಿಕರು ತೆರಳುವ ಮಾರ್ಗಗಳ ಮಾಹಿತಿ  ನೀಡುವ ಮಾರ್ಗದರ್ಶಿಗಳಾಗಿವೆ.
 
ವಿಶೇಷ ಖಾಸಗಿ ಬಸ್ ನಿಲ್ದಾಣ ಹಾಗೂ ಕೆಎಸ್‌ಆರ್‌ಟಿಸಿ ನಿಲ್ದಾಣ ಎಂದು ಬಿಂಬಿತವಾಗಿರುವ ನಗರದ ಈ ಎರಡೂ ನಿಲ್ದಾಣಗಳಲ್ಲಿ ಇರುವ ಅಂಕಣಗಳು ಶಿವಮೊಗ್ಗ ತಾಲ್ಲೂಕು ಹಾಗೂ ಇತರೆ ಜಿಲ್ಲೆಗಳಿಗೆ ತೆರಳುವ ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಫಲಕಗಳನ್ನು ಹಾಕಲಾಗಿದೆ. 
 
ಬೇರೆ ಭಾಗಗಳಿಂದ ಬರುವ ಪ್ರಯಾಣಿಕರಿಗಷ್ಟೇ ಅಲ್ಲದೆ, ಶಿವಮೊಗ್ಗದ ನಾಗರಿಕರು ಬೇರೆ ಸ್ಥಳಗಳಿಗೆ ತೆರಳಲೂ ಸಹಕಾರಿಯಾಗಿದೆ. 
 
2010ರ ಏಪ್ರಿಲ್‌ 25ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಗರದ ಈ ಖಾಸಗಿ ಬಸ್ ನಿಲ್ದಾಣಕ್ಕೆ ಉದ್ಘಾಟಿಸಿದ್ದರು. ನಿಲ್ದಾಣದಲ್ಲಿ 10 ಅಂಕಣಗಳು (ಪ್ಲಾಟ್‌ಫಾರ್ಮ್) ಇವೆ. ನಂತರದ ಕೆಲವು ದಿನಗಳಲ್ಲಿ ಸ್ವಚ್ಛತೆ ಕೊರತೆ, ಮಳೆ ನೀರು ನಿಲ್ಲುತ್ತಿದ್ದ ಕಾರಣ ಪ್ರಯಾಣಿಕರಿಗೆ ಸಾಕಷ್ಟು ಸಮಸ್ಯೆಯಾಗಿತ್ತು. ಕಾಲಕ್ರಮೇಣ, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಯಿತು.  
 
ಪ್ರಯಾಣಿಕರಿಗೆ ಮಧ್ಯವರ್ತಿಗಳ ಕಿರಿಕಿರಿ: 
ಖಾಸಗಿ ಬಸ್ ನಿಲ್ದಾಣದಲ್ಲಿ ಊರುಗಳಿಗೆ ತೆರಳಲು  ಬರುವ ಪ್ರಯಾಣಿಕರಿಗೆ ಬಸ್ ನಿರ್ವಾಹಕರು ಹಾಗೂ ಮಧ್ಯವರ್ತಿಗಳ (ಏಜೆಂಟರು) ಕಿರಿಕಿರಿ ಸಾಮಾನ್ಯ. ಉಡುಪಿ, ಮಂಗಳೂರು ಹಾಗೂ ಮಣಿಪಾಲ್‌ಗೆ ತೆರಳುವ ಪ್ರಯಾಣಿಕರಿಗೆ ಬಸ್ ನಿರ್ವಾಹಕರು ‘ಇದೇ ಬಸ್‌ಗೆ ಹತ್ತಿ.. ’ ಎಂದು ದುಂಬಾಲು ಬೀಳುವ ದೃಶ್ಯ ನಿತ್ಯ ಕಾಣ ಸಿಗುತ್ತದೆ.
 
‘ಬಸ್ ನಿಲ್ದಾಣದ ಪಕ್ಕದಲ್ಲೇ ಪ್ರತಿ ಮಂಗಳವಾರ ಸಂತೆ ನಡೆಯುತ್ತದೆ. ಸಂಚಾರ ವ್ಯವಸ್ಥೆಯಲ್ಲಿ ಸಹಜವಾಗಿ ಏರುಪೇರು ಉಂಟಾಗುತ್ತದೆ. ವ್ಯಾಪಾರಸ್ಥರು ಹಾಗೂ ಗ್ರಾಹಕರು ಜಮಾಯಿಸುತ್ತಾರೆ. ಅಲ್ಲದೆ, ಪೊಲೀಸರು ಈ ಸ್ಥಳದಲ್ಲೇ  ಹೆಲ್ಮೆಟ್ ಸೇರಿದಂತೆ ವಾಹನಗಳ ಚಾಲಕರ ಪರಿಶೀಲನೆ ನಡೆಸುತ್ತಾರೆ. ಇದು ನಾಗರಿಕರಿಗೆ ಹಾಗೂ ದ್ವಿಚಕ್ರ ವಾಹನ ಸವಾರರಿಗೆ  ಕಿರಿಕಿರಿ ಮಾಡುತ್ತಿದೆ’ ಎಂದು ಅಭಿಪ್ರಾಯಪಡುತ್ತಾರೆ ನಗರದ ನಿವಾಸಿ ಎಚ್.ಗಿರೀಶ್ 
 
ಖಾಸಗಿ ಬಸ್‌ನಿಲ್ದಾಣದ ಮಗ್ಗುಲಲ್ಲೇ ಇರುವ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣವನ್ನು 2011ರ ಅಕ್ಟೋಬರ್ 13ರಂದು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡ  ಉದ್ಘಾಟಿಸಿದ್ದರು. ಇಲ್ಲಿಯೂ 11 ಅಂಕಣಗಳಿವೆ. ಇತರೆ ಭಾಗಗಳಿಗೆ ತೆರಳಲು ಅನುಕೂಲ ವಾಗುವ ಊರಿನ ಹೆಸರಿನ ಫಲಕ ಹಾಕಲಾಗಿದೆ. 
 
ನಿಲ್ದಾಣದ ಆವರಣದಲ್ಲಿಯೇ ಬಿಗ್ ಬಜಾರ್ ಮಳಿಗೆ ಮತ್ತು ಹೋಟೆಲ್‌ಗೆ ಅವಕಾಶ ಕಲ್ಪಿಸಲಾಗಿದೆ. ಪ್ರಯಾಣಿಕರ ತಿನಿಸುಗಳಿಗೆ ಹಾಗೂ ದಿನನಿತ್ಯದ ವಸ್ತುಗಳಿಗೆ ಯಾವುದೇ ಕೊರತೆ ಇಲ್ಲ.  
 
‘ಮಧ್ಯರಾತ್ರಿ  ಬರುವ ಪ್ರಯಾಣಿಕರಿಗೆ ಇಲ್ಲಿ ದೊರೆಯುವ ತಿನಿಸುಗಳಿಂದ ಅನುಕೂಲವಾಗಿದೆ. ಸರಿರಾತ್ರಿ ಸಮಯದಲ್ಲಿ ಎಲ್ಲೂ ಹೋಟೆಲ್‌ಗಳು ತೆರೆದಿರುವುದಿಲ್ಲ. ಪ್ರಯಾಣಿಕರ ಜತೆಗೆ, ಬಸ್‌ ಚಾಲಕರು ನಿರ್ವಾಹಕರೂ ಹೊಟ್ಟೆ ಹಸಿವು ನೀಗಿಸಿಕೊಳ್ಳಬಹುದು’ ಎನ್ನುತ್ತಾರೆ ಶೇಷಪ್ಪ.
 
***
ಇಷ್ಟವಾದ ಬಸ್ ಹತ್ತಲು ಬಿಡಬೇಕು. ಆದರೆ, ಮಧ್ಯವರ್ತಿಗಳು  ಕೆಲವೊಮ್ಮೆ ಮಿತಿಮೀರಿ ವರ್ತಿಸುವುದು ಪ್ರಯಾಣಿಕರಿಗೆ ಕಿರಿಕಿರಿಯಾಗಿದೆ
-ವಿ.ನಾಗರಾಜ್, ಪ್ರಯಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT