ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು ಲೋಕಸಭಾ ಕ್ಷೇತ್ರ | 16 ಮಂದಿಗೆ ಠೇವಣಿ ಇಲ್ಲ

ಚುನಾವಣಾ ಕಣದಲ್ಲಿದ್ದ 18 ಮಂದಿ
Published 5 ಜೂನ್ 2024, 6:45 IST
Last Updated 5 ಜೂನ್ 2024, 6:45 IST
ಅಕ್ಷರ ಗಾತ್ರ

ತುಮಕೂರು: ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ 18 ಅಭ್ಯರ್ಥಿಗಳ ಪೈಕಿ 16 ಜನ ಠೇವಣಿ ಕಳೆದುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ, ಕಾಂಗ್ರೆಸ್‌ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಬಿಟ್ಟರೆ ಉಳಿದ ಯಾರಿಗೂ ಠೇವಣಿ ಸಿಕ್ಕಿಲ್ಲ.

ಒಟ್ಟು ಚಲಾವಣೆಯಾದ ಮತಗಳ ಪೈಕಿ ಆರನೇ ಒಂದಷ್ಟು ಮತಗಳನ್ನು ಪಡೆಯಬೇಕು. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ 12,96,720 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ ಕನಿಷ್ಠ 2,16,120 ಮತ ಪಡೆಯಬೇಕು. ಸೋಮಣ್ಣ, ಮುದ್ದಹನುಮೇಗೌಡ ಅವರನ್ನು ಹೊರೆತುಪಡಿಸಿದರೆ ಬೇರೆ ಯಾರೂ ಇಷ್ಟು ಪ್ರಮಾಣದ ಮತ ಪಡೆದಿಲ್ಲ. ಪಕ್ಷೇತರ ಅಭ್ಯರ್ಥಿ ಜೆ.ಕೆ.ಸಮಿ 6,761 ಮತಗಳೊಂದಿಗೆ 3ನೇ ಸ್ಥಾನ ಪಡೆದಿದ್ದಾರೆ. ಎಸ್‌ಯುಸಿಐ, ಬಿಎಸ್‌ಪಿ, ಕೆಆರ್‌ಎಸ್‌ ಪಕ್ಷದ ಅಭ್ಯರ್ಥಿಗಳಿಗಿಂತ ಪಕ್ಷೇತರರು ಹೆಚ್ಚನ ಮತ ಪಡೆದಿದ್ದಾರೆ.

ಬಹುಜನ ಸಮಾಜ ಪಕ್ಷದ ಜೆ.ಎನ್.ರಾಜಸಿಂಹ (5,554), ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಎಸ್.ಎನ್.ಸ್ವಾಮಿ (4,591), ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಪ್ರದೀಪ್ ಕುಮಾರ್‌ ದೊಡ್ಡ ಮುದ್ದೇಗೌಡ (1,618), ನ್ಯಾಷನಲ್ ಮಹಾಸಭಾ ಪಕ್ಷದ ಎಚ್.ಆರ್.ಬಸವರಾಜು (439), ಕನ್ನಡ ಪಕ್ಷದ ಎಚ್.ಬಿ.ಎಂ.ಹಿರೇಮಠ್ (477) ಮತಗಳು ಬಂದಿವೆ.

ಪಕ್ಷೇತರ ಅಭ್ಯರ್ಥಿಗಳಾದ ಕಪನಿಗೌಡ (471), ಬಿ.ದೇವರಾಜು (499), ಆರ್.ನಾರಾಯಣಪ್ಪ (507), ಎಚ್.ಎಸ್.ನೀಲಕಂಠೇಶ (719), ಆರ್.ಪುಷ್ಪ (629), ಪ್ರಕಾಶ್ ಆರ್.ಎ.ಜೈನ್ (863), ಮಲ್ಲಿಕಾರ್ಜುನಯ್ಯ (1,880), ಎಚ್.ಎಲ್.ಮೋಹನ್ ಕುಮಾರ್ (893), ಆರ್.ಎಸ್.ರಂಗನಾಥ (3,132), ಜೆ.ಕೆ.ಸಮಿ (6,775), ಟಿ.ಬಿ.ಸಿದ್ದರಾಮೇಗೌಡ (1,646) ಮತ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT