ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಪರಿಚಯ ಕಾರ್ಯಕ್ರಮ: ತುಮಕೂರು ವಿವಿಯಲ್ಲಿ 49 ಸಾವಿರ ಪುಸ್ತಕ

Published 4 ಜನವರಿ 2024, 6:03 IST
Last Updated 4 ಜನವರಿ 2024, 6:03 IST
ಅಕ್ಷರ ಗಾತ್ರ

ತುಮಕೂರು: ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ 49,387 ಪುಸ್ತಕಗಳು, 36 ನಿಯತಕಾಲಿಕೆಗಳು ಲಭ್ಯ ಇವೆ ಎಂದು ವಿ.ವಿ ಗ್ರಂಥಪಾಲಕ ಬಿ.ರವಿವೆಂಕಟ್‌ ತಿಳಿಸಿದರು.

ವಿ.ವಿಯಲ್ಲಿ ಬುಧವಾರ ಆಯೋಜಿಸಿದ್ದ ‘ಗ್ರಂಥಾಲಯ ಪರಿಚಯ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಟ್ಟು ಪುಸ್ತಕಗಳ ಪೈಕಿ 8,481 ಅನುದಾನಿತ ಪುಸ್ತಕಗಳು, 3,089 ರೂಸಾ ಪುಸ್ತಕಗಳು, 734 ಎಸ್‌.ಸಿ, ಎಸ್‌.ಟಿ ಅನುದಾನದ ಪುಸ್ತಕಗಳು, 5,123 ಎಸ್‍ಸಿಪಿ, ಟಿಎಸ್‍ಪಿ ಯೋಜನೆಯ ಪುಸ್ತಕಗಳು ಸೇರಿವೆ. ಒಟ್ಟು 151 ಇ- ಪುಸ್ತಕಗಳು ಹಾಗೂ 13,100 ಇ-ಜರ್ನಲ್‍ಗಳಿವೆ ಎಂದು ಮಾಹಿತಿ ನೀಡಿದರು.

ವಿ.ವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ‘ತಾಲ್ಲೂಕಿನ ಬಿದರೆಕಟ್ಟೆಯಲ್ಲಿ ನಿರ್ಮಾಣವಾಗುತ್ತಿರುವ ವಿ.ವಿ ನೂತನ ಕ್ಯಾಂಪಸ್‍ನಲ್ಲಿ ‘ಪ್ರಕೃತಿಯೊಂದಿಗೆ ಜ್ಞಾನ’ ಎಂಬ ಪರಿಕಲ್ಪನೆಯಲ್ಲಿ ಹಸಿರು ಗ್ರಂಥಾಲಯ ನಿರ್ಮಿಸುವ ಯೋಜನೆ ಪ್ರಗತಿಯಲ್ಲಿದೆ’ ಎಂದರು.

ವಿ.ವಿ ಕಲಾ ನಿಕಾಯದ ಡೀನ್ ಪ್ರೊ.ಎಚ್.ಕೆ.ಶಿವಲಿಂಗಸ್ವಾಮಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT