ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಾ: ರಸ್ತೆಗೆ ಉರುಳಿದ ಆಲದ ಮರ: ಸಂಚಾರಕ್ಕೆ ಅಡ್ಡಿ

Published 23 ಮೇ 2024, 4:29 IST
Last Updated 23 ಮೇ 2024, 4:29 IST
ಅಕ್ಷರ ಗಾತ್ರ

ಶಿರಾ: ತಾಲ್ಲೂಕಿನ ಬುಕ್ಕಾಪಟ್ಟಣ ಗ್ರಾಮದ ಎಚ್.ಪಿ. ಗ್ಯಾಸ್ ಕಚೇರಿ ಬಳಿ ಮಂಗಳವಾರ ರಾತ್ರಿ ಗಾಳಿ, ಮಳೆಗೆ ಬೃಹತ್ ಗಾತ್ರದ ಆಲದ ಮರ ರಸ್ತೆಗೆ ಉರುಳಿದ ಪರಿಣಾಮ ಬುಕ್ಕಾಪಟ್ಟಣ- ಹಾಗಲವಾಡಿ ಮಾರ್ಗದ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿತ್ತು.

ಬುಕ್ಕಾಪಟ್ಟಣ- ಹಾಗಲವಾಡಿ ರಸ್ತೆಯಲ್ಲಿ ಬುಡ ಸಮೇತ ಮರ ಉರುಳಿ ಬಿದ್ದ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲ ವಾಹನಗಳನ್ನು ಪಕ್ಕದ ಕ್ಯಾತೆದೇವರಹಟ್ಟಿ ಗ್ರಾಮದ ಮೂಲಕ ಕಳುಹಿಸಲಾಯಿತು.

ಸ್ಥಳಕ್ಕೆ ಬಂದ ಬುಕ್ಕಾಪಟ್ಟಣ ಪೊಲೀಸ್ ಉಪ ಠಾಣೆ ಅಧಿಕಾರಿ ನಾಗರಾಜು, ಪ್ರಹ್ಲಾದ್, ಅರಣ್ಯ ಇಲಾಖೆ ಸಿಬ್ಬಂದಿ ಕಿರಣ್ ಕುಮಾರ್ ಅವರು ತಕ್ಷಣ ಕಾರ್ಯಚರಣೆ ನಡೆಸಿ ರಾತ್ರಿಯೇ ಜೆಸಿಬಿಯಿಂದ ಮರವನ್ನು ಪಕ್ಕಕ್ಕೆ ಸರಿಸಿ ರಂಬೆಗಳನ್ನು ತುಂಡರಿಸಿ ಸಂಚಾರಕ್ಕೆ ಅಣಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT