ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಮಕ್ಕಳಿಗೆ ಪ್ರತ್ಯೇಕ ಬಾಲವಾಡಿ!

ಹೊಸ ತಿರುವು ಪಡೆದ ಅಂಗನವಾಡಿ ಕಾರ್ಯಕರ್ತೆ ನಿಯೋಜನೆ ವಿವಾದ: ಖಾಲಿ ಕೇಂದ್ರದಲ್ಲಿ ಏಕಾಂಗಿ ಶಿಕ್ಷಕಿ!
Last Updated 21 ಡಿಸೆಂಬರ್ 2021, 5:02 IST
ಅಕ್ಷರ ಗಾತ್ರ

ಕುಣಿಗಲ್ (ತುಮಕೂರು): ಅಂಗನವಾಡಿ ಕೇಂದ್ರಕ್ಕೆ ತಮ್ಮ ಧರ್ಮದ ಕಾರ್ಯಕರ್ತೆಯನ್ನು ನಿಯೋಜಿಸುವಂತೆ ಪಟ್ಟು ಹಿಡಿದಿದ್ದ ಬೊಮ್ಮೇನಹಳ್ಳಿ ಪಾಳ್ಯದ ಮುಸ್ಲಿಮರು ಅಂಗನವಾಡಿ ಕೇಂದ್ರಕ್ಕೆ ಬೀಗ ಮತ್ತು ಮುಳ್ಳು ಜಡಿದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಗ್ರಾಮದಬಹುಸಂಖ್ಯಾತ ಮುಸ್ಲಿಮರು ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕಳುಹಿಸದೆ, ಪ್ರತ್ಯೇಕ ಬಾಲವಾಡಿ ಕೇಂದ್ರ ಆರಂಭಿಸಿದ್ದಾರೆ.ಸರ್ಕಾರದ ಸೌಲಭ್ಯಗಳನ್ನು
ತಿರಸ್ಕರಿಸಿದ್ದು, ಮಕ್ಕಳಿಗೆ ಸ್ವಂತ ಖರ್ಚಿನಲ್ಲಿ ಆಹಾರ, ಹಾಲು ಮತ್ತು ಮೊಟ್ಟೆ ವಿತರಿಸುತ್ತಿದ್ದಾರೆ.

ನವೆಂಬರ್‌ನಲ್ಲಿಅನ್ಯ ಸಮುದಾಯದ ಮಹಿಳೆಯನ್ನು ಅಂಗನವಾಡಿ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಗ್ರಾಮಸ್ಥರು ಕೇಂದ್ರಕ್ಕೆ ಬೀಗ ಹಾಕಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ಅಸಮಾಧಾನಗೊಂಡಗ್ರಾಮಸ್ಥರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಬಾರದು ಎಂದು ತೀರ್ಮಾನಿಸಿದ್ದಾರೆ. ಜಮಾತ್ ಸಭೆಯ ತೀರ್ಮಾನದಂತೆ ಪ್ರಾರ್ಥನಾ ಮಂದಿರದ ಪಕ್ಕದ ಹಳೆ ಕಟ್ಟಡದಲ್ಲಿಐದು ದಿನಗಳಿಂದ ಬಾಲವಾಡಿ ಕೇಂದ್ರ ಪ್ರಾರಂಭಿಸಿದ್ದಾರೆ.

‘ಸೌಹಾರ್ದತೆಯುತವಾಗಿ ವಿವಾದ ಬಗೆಹರಿಸುವ ಬದಲು ಅಧಿಕಾರಿಗಳು ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಮುಸ್ಲಿಂ ಸಮುದಾಯದ ಕಾರ್ಯಕರ್ತೆಯನ್ನು ನಿಯೋಜಿಸುವವರೆಗೂ ಹೋರಾಟ ಮುಂದುವರೆಯಲಿದೆ’ ಎಂದು ಗ್ರಾಮದ ಬೀಬಿ ಹಜೀರಾ, ಶಬಾನಭಾನು ಹೇಳಿದ್ದಾರೆ.

‘ಪೋಷಕರು ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿಲ್ಲ. ಮನೆಗಳಿಗೆ ಭೇಟಿ ನೀಡಿ ಮನವಿ ಮಾಡಲಾಗುವುದು. ಕಳೆದ ಎರಡು ತಿಂಗಳಿಂದ ಮಕ್ಕಳಿಗೆ ಆಹಾರ ವಿತರಣೆಯಾಗಿಲ್ಲ’ ಎಂದುಅಂಗನವಾಡಿ ಕಾರ್ಯಕರ್ತೆ ಸುಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT