ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ಆಂಬುಲೆನ್ಸ್‌ ಅಪಘಾತ: ಶುಶ್ರೂಷಕಿ ಸಾವು

Published 31 ಮಾರ್ಚ್ 2024, 15:40 IST
Last Updated 31 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿಯ ಚೋಳಾಪುರ ಗೇಟ್‌ ಬಳಿ ಶನಿವಾರ ರಾತ್ರಿ ಕೆ–ಶಿಪ್‌ ಆಂಬುಲೆನ್ಸ್‌ ಮತ್ತು ಟ್ರ್ಯಾಕ್ಟರ್‌ ಮಧ್ಯೆ ನಡೆದ ಅಪಘಾತದಲ್ಲಿ ಆಂಬುಲೆನ್ಸ್‌ನಲ್ಲಿದ್ದ ಶುಶ್ರೂಷಕಿ ರೂಪಾಶ್ರೀ (27) ಸಾವನ್ನಪ್ಪಿದ್ದಾರೆ.

ರೂಪಾಶ್ರೀ ನಗರದ ಮೆಳೆಕೋಟೆಯ ರಾಜೀವ್‌ಗಾಂಧಿ ನಗರದ ನಿವಾಸಿ. ಚೋಳಾಪುರದ ಗಂಗರಾಜು (60) ಎಂಬುವರನ್ನು ಹೆಬ್ಬೂರು ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಬರುವಾಗ ಅಪಘಾತ ಸಂಭವಿಸಿದೆ. ಹೆಬ್ಬೂರು–ತುಮಕೂರು ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಆಂಬುಲೆನ್ಸ್‌ ಡಿಕ್ಕಿಯಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರೂಪಾಶ್ರೀ ಬೆಂಗಳೂರಿಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಆಂಬುಲೆನ್ಸ್‌ನಲ್ಲಿದ್ದ ಗಂಗರಾಜು ಪತ್ನಿ ಗಂಗಮ್ಮ (55), ಮಗ ರಮೇಶ್‌ (35) ಮತ್ತು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಟ್ರ್ಯಾಕ್ಟರ್‌ ನಜ್ಜುಗುಜ್ಜಾಗಿದೆ. ಟ್ರಾಕ್ಟರ್‌ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT