ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಠಾಣೆಯಿಂದ ಪರಾರಿಯಾಗಿದ್ದ ಆರೋಪಿ ಬಂಧನ

ಪ್ರೇಯಸಿ ಭೇಟಿಯಾಗಲು ಹೊರಟಿದ್ದ ಆರೋಪಿ ಸೈಯದ್‌
Published 5 ಫೆಬ್ರುವರಿ 2024, 7:02 IST
Last Updated 5 ಫೆಬ್ರುವರಿ 2024, 7:02 IST
ಅಕ್ಷರ ಗಾತ್ರ

ತುಮಕೂರು: ಫೆ.2ರಂದು ಗುಬ್ಬಿ ಠಾಣೆಯಿಂದ ಪರಾರಿಯಾಗಿದ್ದ ಕಳ್ಳತನ ಆರೋಪಿ ಸೈಯದ್‌ ಅಲಿ (25) ಎಂಬುವರನ್ನು ಪೊಲೀಸರು ತಡರಾತ್ರಿ ನಗರದ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕಳ್ಳತನ ಪ್ರಕರಣದ ವಿಚಾರಣೆಗಾಗಿ ಸೈಯದ್‌ರನ್ನು ಜ.27ರಂದು ಪೊಲೀಸರು ವಶಕ್ಕೆ ಪಡೆದಿದ್ದರು. ಫೆ.2ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಬೇಕಿತ್ತು. ಅಂದು ಬೆಳಗಿನ ಜಾವ ಪೊಲೀಸರು ನಿದ್ದೆಯ ಮಂಪರಿನಲ್ಲಿದ್ದಾಗ ಕೈಕೋಳ ಕಳಚಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದರು. ಆರೋಪಿಯ ಪತ್ತೆಗೆ 3 ವಿಶೇಷ ತಂಡಗಳು ರಚಿಸಲಾಗಿತ್ತು.

ಒಂದು ತಂಡ ಮುಂಬೈ, ಇನ್ನೊಂದು ತಂಡ ಆರೋಪಿ ಊರು ಗದಗದಲ್ಲಿ ಮತ್ತೊಂದು ತಂಡ ಬೆಂಗಳೂರು ಮತ್ತು ತುಮಕೂರಿನ ವಿವಿಧ ಕಡೆಗಳಲ್ಲಿ ಆರೋಪಿಯ ಪತ್ತೆಗೆ ಹುಡುಕಾಟ ನಡೆಸಿತ್ತು. ಸೈಯದ್‌ ಮುಂಬೈಗೆ ಹೋಗಲು ಶನಿವಾರ ರಾತ್ರಿ ಬೆಂಗಳೂರು–ಮುಂಬೈ ರೈಲು ಹತ್ತಿದ್ದರು. ಆರೋಪಿ ಈ ಹಿಂದೆ ಹಲವು ಕಳ್ಳತನದ ಪ್ರಕರಣದಲ್ಲಿ ಭಾಗಿಯಾಗಿ, ಜೈಲು ಶಿಕ್ಷೆ ಅನುಭವಿಸಿದ್ದರು. ಆರೋಪಿಯ ಜಾಡು ಹಿಡಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ನಗರದ ರೈಲು ನಿಲ್ದಾಣದಲ್ಲಿ ಬೆಂಗಳೂರು–ಮುಂಬೈ ರೈಲಿನಲ್ಲಿ ಪರಿಶೀಲನೆ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದಿದ್ದಾನೆ.

ಪ್ರೇಯಸಿ ಭೇಟಿಯಾಗಲು ಹೊರಟಿದ್ದ!: ಆರೋಪಿ ಸೈಯದ್‌ ತನ್ನ ಮುಂಬೈ ಪ್ರೇಯಸಿಯನ್ನು ಭೇಟಿಯಾಗಲು ಹೊರಟಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಸೈಯದ್‌ ವಿರುದ್ಧ ಬೆಂಗಳೂರಿನ ಕಲಾಸಿಪಾಳ್ಯ, ತುಮಕೂರು, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT