ಸೋಮವಾರ, ಮಾರ್ಚ್ 20, 2023
30 °C
ಇಳಿದ ಹಣ್ಣು, ತರಕಾರಿ; ಕೋಳಿ ದುಬಾರಿ

ಮೆಣಸಿನಕಾಯಿ ಮತ್ತಷ್ಟು ಖಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಬೇಸಿಗೆ ಸಮಯದಲ್ಲಿ ಗಗನ ಮುಖಿಯಾಗಿದ್ದ ಹಣ್ಣಿನ ಬೆಳೆ ಈಗ ಕೊಂಚ ಕಡಿಮೆಯಾಗುತ್ತಾ ಸಾಗಿದೆ. ಅಡುಗೆ ಎಣ್ಣೆ ಧಾರಣೆ ಸಹ ಇಳಿಮುಖ ಮಾಡಿದೆ. ತರಕಾರಿ, ಸೊಪ್ಪಿನ ಬೆಲೆ ಸ್ವಲ್ಪ ಮಟ್ಟಿಗೆ ತಗ್ಗಿದ್ದರೆ, ಹಸಿಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ.

ಅಡುಗೆ ಎಣ್ಣೆ ಸನ್‌ಫ್ಲವರ್ ಲೀಟರ್ ₹148ಕ್ಕೆ, ಪಾಮಾಯಿಲ್ ಲೀಟರ್ ₹114ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆಮದಿಗೆ ಅವಕಾಶ ಸಿಕ್ಕಿರುವುದು, ಮುಂದೆ ಆಷಾಢ ಬರುತ್ತಿದ್ದು, ಶುಭ ಕಾರ್ಯ
ಗಳು ಕಡಿಮೆಯಾಗಲಿದ್ದು, ಮುಂದಿನ
ದಿನಗಳಲ್ಲಿ ಬೆಲೆ ಮತ್ತಷ್ಟು ಇಳಿಯ
ಬಹುದು ಎಂದು ಅಂದಾಜಿಸಲಾಗಿದೆ.

ಬೇಳೆ, ಅಕ್ಕಿ ಸೇರಿದಂತೆ ಇತರ
ಧಾನ್ಯಗಳ ಬೆಲೆ ಬಹುತೇಕ ಸ್ಥಿರವಾಗಿ
ದ್ದರೂ ಉದ್ದಿನ ಬೇಳೆ, ಬಟಾಣಿ, ಗೋಧಿ ಬೆಲೆ ಕೊಂಚ ಏರಿಕೆಯಾಗಿದೆ. ಕಡಲೆ ಬೇಳೆ ಬೆಲೆ ತುಸು ತಗ್ಗಿದೆ. ಉಳಿದಂತೆ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ.

ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ಹಸಿಮೆಣಸಿನಕಾಯಿ ಧಾರಣೆ ಹಿಂದಿನ ವಾರಕ್ಕೆ ಹೋಲಿಸಿದರೆ ಬಹುತೇಕ ದುಪ್ಪಟ್ಟಾಗಿದೆ. ಕಳೆದ ವಾರ ಕೆ.ಜಿ ₹35–40 ಇದ್ದರೆ, ಈ ವಾರ ಕೆ.ಜಿ ₹55–60ಕ್ಕೆ ಹೆಚ್ಚಳವಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಇಳಿಕೆಯತ್ತ ಸಾಗಿದ್ದ ಬೀನ್ಸ್ ಬೆಲೆ ಈ ವಾರ ಕೆ.ಜಿ ₹25– 30ಕ್ಕೆ ಕಡಿಮೆಯಾಗಿದೆ. ಗೆಡ್ಡೆಕೋಸು, ಎಲೆ
ಕೋಸು, ಕ್ಯಾಪ್ಸಿಕಂ ಬೆಲೆ ಕಡಿಮೆಯಾಗಿದೆ. ಸೋತೆ ಕಾಯಿ ದುಬಾರಿಯಾಗಿದ್ದು, 1ಕ್ಕೆ ₹8–10ಕ್ಕೆ ಮಾರಾಟವಾಗುತ್ತಿದೆ. ಕ್ಯಾರೇಟ್ ಬೆಲೆ ಏರಿಕೆ ಮುಂದುವರಿಸಿದೆ. ಸೊಪ್ಪಿನ ಬೆಲೆ ಮತ್ತಷ್ಟು ಕುಸಿದಿದ್ದು, ಕೊತ್ತಂಬರಿ, ಸಬ್ಬಕ್ಕಿ ಸೊಪ್ಪು ಕೆ.ಜಿ ₹25–30, ಮೆಂತ್ಯ ಸೊಪ್ಪು ಕೆ.ಜಿ ₹30–35, ಪಾಲಕ್ ಸೊಪ್ಪು ಕೆ.ಜಿ ₹10–15ಕ್ಕೆ ಇಳಿಕೆಯಾಗಿದೆ.

ಹಣ್ಣು ತಿನ್ನಬಹುದು: ಕಳೆದ ಆರು ತಿಂಗಳಿಂದ ಬೆಲೆ ಏರಿಕೆಯತ್ತಲೇ ಹೆಜ್ಜೆ ಹಾಕಿದ್ದ ಹಣ್ಣುಗಳ ಧಾರಣೆ ಕೊಂಚ ಇಳಿದಂತೆ ಕಂಡುಬರುತ್ತಿದೆ. ಸೇಬು ಕೆ.ಜಿ ₹300ರವರೆಗೂ (ಗರಿಷ್ಠ ಬೆಲೆ) ಇದ್ದದ್ದು, ಈಗ ₹250ಕ್ಕೆ ಬಂದಿದೆ. ದಾಳಿಂಬೆ, ಕಿತ್ತಳೆ ಇತರೆ ಕೆಲ ಹಣ್ಣುಗಳ ಬೆಲೆ ಅಲ್ಪ ಮಟ್ಟಿಗೆ ಕಡಿಮೆಯಾಗಿದೆ. ಮಾವಿನ ಸೀಸನ್‌ ಮುಗಿಯುತ್ತಾ ಬಂದಿದ್ದು
ಬೆಲೆ ಹೆಚ್ಚಳವಾಗಿದೆ. ಬಾದಾಮಿ ಕೆ.ಜಿ
₹200, ಮಲಗೂಬಾ ₹120ಕ್ಕೆ ಏರಿಕೆಯಾಗಿದೆ.

ಕೋಳಿ ದುಬಾರಿ: ಕೋಳಿ ಬೆಲೆ ಕೆ.ಜಿ.ಗೆ ₹15 ಏರಿಕೆಯಾಗಿದ್ದು, ಬ್ರಾಯ್ಲರ್ ಕೆ.ಜಿ ₹145ಕ್ಕೆ, ರೆಡಿ ಚಿಕನ್ ಕೆ.ಜಿ ₹220, ಮೊಟ್ಟೆ ಕೋಳಿ ಕೆ.ಜಿ ₹130ಕ್ಕೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು