ಅಧಿಕಾರ ಗದ್ದುಗೆ ಏರಲು ಕಾಂಗ್ರೆಸ್ ಬಿಜೆಪಿ ಪೈಪೋಟಿ

7
ಚಿಕ್ಕನಾಯಕನಹಳ್ಳಿ ಪುರಸಭೆಗೆ ತುರುಸಿನಿಂದ ನಾಮಪತ್ರ ಸಲ್ಲಿಸಿದ ಆಕಾಂಕ್ಷಿಗಳು

ಅಧಿಕಾರ ಗದ್ದುಗೆ ಏರಲು ಕಾಂಗ್ರೆಸ್ ಬಿಜೆಪಿ ಪೈಪೋಟಿ

Published:
Updated:
Deccan Herald

ಚಿಕ್ಕನಾಯಕನಹಳ್ಳಿ: ಪಟ್ಟಣದ ಪುರಸಭೆ 23 ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸುವ ಕಡೆಯ ದಿನವಾದ ಶನಿವಾರ ಬರೋಬ್ಬರಿ 68 ನಾಮಪತ್ರಗಳು ಸಲ್ಲಿಕೆಯಾದವು.ಇದರೊಂದಿಗೆ ಒಟ್ಟು 79 ನಾಮಪತ್ರಗಳು ಸಲ್ಲಿಕೆಯಾದವು.

ಚಿಗುರಿದ ಕಾಂಗ್ರೆಸ್: ಕಳೆದ ಬಾರಿ 23 ವಾರ್ಡ್ ಪೈಕಿ 14 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸಿತ್ತು. ಈ ಬಾರಿ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಕಂಡು ಬಂದಿತ್ತು. 9ನೇ ವಾರ್ಡ್‌ಗೆ ಇಬ್ಬರು ನಾಮಪತ್ರ ಸಲ್ಲಿಸುವುದರೊಂದಿಗೆ ಒಟ್ಟು 24 ಅಭ್ಯರ್ಥಿಗಳು ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ 30 ವರ್ಷಗಳಿಂದ ನೆಲೆ ಕಳೆದು ಕೊಂಡ ಕಾಂಗ್ರೆಸ್ ಈ ಬಾರಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಕಣಕ್ಕಿಳಿದಿದೆ.

ಬಿಜೆಪಿ ಭದ್ರ: ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿರುವುದರಿಂದ ಬಿಜೆಪಿ ಕಾರ್ಯಕರ್ತರು ಗೆಲುವಿನ ಹುಮ್ಮಸ್ಸಿನಲ್ಲೇ ಪ್ರಚಾರ ಆರಂಭಿಸಿದ್ದಾರೆ.

11 ಹಾಗೂ 23ನೇ ವಾರ್ಡ್ ಹೊರತುಪಡಿಸಿ ಉಳಿದ 21 ವಾರ್ಡ್‌ಗಳಿಗೆ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದ 17ನೇ ವಾರ್ಡ್ ಸಿ.ಪಿ.ಮಹೇಶ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜೆಡಿಎಸ್‌ನಿಂದ ಗೆದ್ದಿದ್ದ ಎಚ್.ಬಿ.ಪ್ರಕಾಶ್ ಹಾಗೂ ಸಿ.ಎಂ.ರಂಗಸ್ವಾಮಯ್ಯ ಕೂಡಾ ಬಿಜೆಪಿ ಪಾಲಾಗಿದ್ದಾರೆ. ಈ ಬಾರಿ ಜೆಡಿಎಸ್ ತೆಕ್ಕೆಯಲ್ಲಿದ್ದ ಪುರಸಭೆಯನ್ನು ಬಿಜೆಪಿ ತನ್ನ ತೆಕ್ಕೆಗೆ ತಂದುಕೊಳ್ಳಲು ಪ್ರಯತ್ನ ನಡೆಸಿದೆ.

ಜೆಡಿಎಸ್‌ ಮುಳುವಾದ ತಂತ್ರ: ಕಳೆದ ಬಾರಿ 18 ವಾರ್ಡ್‌ಗಳನ್ನು ತನ್ನ ತೆಕ್ಕೆಗೆ ಪಡೆಯುವುದರ ಮೂಲಕ ಜೆಡಿಎಸ್ ಗದ್ದುಗೆ ಹಿಡಿದಿತ್ತು. ಆದರೆ, ಸಿ.ಬಿ.ಸುರೇಶ್‌ಬಾಬು ಸೋಲು ಪುರಸಭೆಯ ಫಲಿತಾಂಶದಮೇಲೂ ಪ್ರಭಾವ ಬೀರಲಿದೆ ಎನ್ನಲಾಗುತ್ತಿದೆ.

ಕಳೆದ ಬಾರಿಯ ಪಾರಮ್ಯವನ್ನು ಮುಂದುವರಿಸಲು ಜೆಡಿಎಸ್ 6 ತಿಂಗಳಿಗೆ ಒಬ್ಬರಂತೆ 8 ಜನರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು.  ಸೂತ್ರವೇ ಜೆಡಿಎಸ್‌ಗೆ ಮುಳುವಾಯಿತು ಎಂಬುದು ಅಧಿಕಾರ ಅನುಭವಿಸಿದ ಕೆಲ ಅಧ್ಯಕ್ಷರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅಲ್ಲದೇ, ಸಿ.ಡಿ.ಚಂದ್ರಶೇಖರ್ ಕಾಂಗ್ರೆಸ್, ಎಚ್.ಬಿ.ಪ್ರಕಾಶ್ ಬಿಜೆಪಿ ಸೇರಿದ್ದಾರೆ. ಖಲಂದರ್ ಬಿಜೆಪಿ ಕದ ತಟ್ಟಿ ಮತ್ತೆ ಜೆಡಿಎಸ್‌ಗೆ ಮರಳಿದ್ದಾರೆ.

ನಾಮಪತ್ರ ಪರಿಶೀಲನೆಗೆ ಆಗಸ್ಟ್ 20ರಂದು ಕೊನೆಯ ದಿನವಾಗಿದ್ದು, ಅಂತಿಮವಾಗಿ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯುತ್ತಾರೆ ಎಂಬುದು ಸೋಮವಾರ ಅಂತಿಮವಾಗಲಿದೆ. ಆ.31ಕ್ಕೆ ಚುನಾವಣೆ ನಡೆಯಲಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !