ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುರುವೇಕೆರೆ: ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಸರಸ್ವತಿ ಮಂದಿರ ನಿರ್ಮಾಣ

Published : 27 ಸೆಪ್ಟೆಂಬರ್ 2024, 14:21 IST
Last Updated : 27 ಸೆಪ್ಟೆಂಬರ್ 2024, 14:21 IST
ಫಾಲೋ ಮಾಡಿ
Comments

ತುರುವೇಕೆರೆ: ವಿಷ್ಣುವರ್ಧನ್ ಸೇನಾ ಸಮಿತಿಯಿಂದ ಪಟ್ಟಣದ ಎನ್‌ಎಚ್‌ಪಿಎಸ್ ಶಾಲಾ ಆವರಣದಲ್ಲಿ ಸರಸ್ವತಿ ಮಂದಿರ ನಿರ್ಮಿಸಲಾಗುವುದು ಎಂದು ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ತಿಳಿಸಿದರು.

ಪಟ್ಟಣದ ಎನ್‌ಎಚ್‌ಪಿಎಸ್ ಶಾಲೆ ಆವರಣದಲ್ಲಿ ಸರಸ್ವತಿ ಮಂದಿರಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ವಿಷ್ಣುವರ್ಧನ್ ಅವರ ಉದ್ದೇಶ ಎಲ್ಲ ಬಡ ಮಕ್ಕಳಿಗೆ ವಿದ್ಯಾರ್ಜನೆ ಮಾಡಿಸಬೇಕು ಎಂಬುದಾಗಿತ್ತು. ಅದೇ ಪ್ರಕಾರವಾಗಿ ಸೇನಾ ಸಮಿತಿಯಿಂದ ತಾಲ್ಲೂಕಿನ ಹಲವು ಸರ್ಕಾರಿ ಶಾಲೆಗಳಿಗೆ ತೆರಳಿ ಅಲ್ಲಿಯ ವಿದ್ಯಾರ್ಥಿಗಳಿಗೆ ಅಗತ್ಯ ವಸ್ತು ನೀಡಿ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳ ಪ್ರತಿಭೆ ಹೊರತರುವ ಸಲುವಾಗಿ ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಕೆ.ಕೃಷ್ಣಪ್ರಸಾದ್, ಮುಖ್ಯ ಶಿಕ್ಷಕ ನಂ.ರಾಜು, ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಶಂಕರಪ್ಪ, ಚಿದಂಬರೇಶ್ವರ  ಗ್ರಂಥಾಲಯ ಸಂಸ್ಥಾಪಕ ರೈಲ್ವೆ ರಾಮಚಂದ್ರು, ವಿಷ್ಣುವರ್ಧನ್ ಸೇನಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಭರತ್ ಕುಮಾರ್, ಕಾರ್ಯದರ್ಶಿ ಗಿರೀಶ್, ಸದಸ್ಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT