ಬುಧವಾರ, ಸೆಪ್ಟೆಂಬರ್ 18, 2019
22 °C

ನವಜಾತ ಶಿಶುವಿಗೆ ಬೆಂಕಿ ಹಚ್ಚಿ ಕೊಲೆ

Published:
Updated:

ತುಮಕೂರು: ನಗರದ ಮುನೇಶ್ವರ ಬಡಾವಣೆಯ ಶಾಂತಿನಗರ ಕೆರೆಕಟ್ಟೆಯ ಏರಿಯ ಮೇಲೆ ನವಜಾತ ಹೆಣ್ಣು ಶಿಶುವಿಗೆ ಬೆಂಕಿ ಹಚ್ಚಿ ಸಾಯಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆಗಸ್ಟ್ 19ರಂದು ಸಂಜೆ ಈ ಘಟನೆ ನಡೆದಿದೆ. ಯಾರೋ ಹೆಣ್ಣು ಮಗುವಿನ ಜನನ ಮರೆಮಾಚಲು ಕೆರೆ ಏರಿಯ ಮೇಲೆ ಮಗುವನ್ನು ಸಾಯಿಸಿ ಬೆಂಕಿ ಹಚ್ಚಿ ಹೋಗಿದ್ದಾರೆ. ಸಂಬಂಧಪಟ್ಟ ಪೋಷಕರನ್ನ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಿಳಾ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

Post Comments (+)