ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಯುವಕನಿಗೆ ₹6.48 ಲಕ್ಷ ಪಂಗನಾಮ

Published 23 ಜನವರಿ 2024, 6:01 IST
Last Updated 23 ಜನವರಿ 2024, 6:01 IST
ಅಕ್ಷರ ಗಾತ್ರ

ತುಮಕೂರು: ಆನ್‌ಲೈನ್‌ ಮೂಲಕ ಪಾರ್ಟ್‌ಟೈಮ್‌ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕನಿಂದ ₹6.48 ಲಕ್ಷ ವಂಚಿಸಿದ್ದಾರೆ.

ನಗರದ ಮೆಳೆಕೋಟೆಯ ನಿವಾಸಿ ರಿಜ್ವಾನ್‌ ಅಲಿ ಎಂಬ ಯುವಕ ಸೈಬರ್‌ ಕಳ್ಳರು ಬೀಸಿದ ಬಲೆಗೆ ಬಿದ್ದು, ಹಣ ಕಳೆದುಕೊಂಡಿದ್ದಾರೆ. ಕಳೆದ ಡಿ.9ರಂದು ವಾಟ್ಸ್‌ ಆ್ಯಪ್‌ ಮುಖಾಂತರ ಮೆಸೇಜ್‌ ಮಾಡಿರುವ ಸೈಬರ್‌ ಕಳ್ಳರು ‘ಟಾಸ್ಕ್‌ ಜಾಬ್‌’ ಎಂಬ ಕೆಲಸ ಮಾಡಿ ದಿನಕ್ಕೆ ₹1,500 ದಿಂದ ₹5 ಸಾವಿರದ ವರೆಗೆ ಸಂಪಾದಿಸಬಹುದು ಎಂದು ತಿಳಿಸಿದ್ದಾರೆ.

ಟಾಸ್ಕ್‌ಗಳನ್ನು ನೀಡಲು ಹಣ ಹೂಡಿಕೆ ಮಾಡುವಂತೆ ಹೇಳಿದ್ದಾರೆ. ಜಾಸ್ತಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ರಿಜ್ವಾನ್‌ ಹಂತ ಹಂತವಾಗಿ ₹6.48 ಲಕ್ಷ ಹಣವನ್ನು ಸೈಬರ್‌ ಕಳ್ಳರು ಹೇಳಿದ ವಿವಿಧ ಬ್ಯಾಂಕ್‌ ಖಾತೆಗಳು ಮತ್ತು ಯುಪಿಐ ಐ.ಡಿಗಳಿಗೆ ವರ್ಗಾವಣೆ ಮಾಡಿದ್ದಾರೆ.

ಇದುವರೆಗೆ ವರ್ಗಾವಣೆ ಮಾಡಿದ ಎಲ್ಲ ಹಣ ವಾಪಸ್‌ ನೀಡಲು ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿ ಎಂದು ತಿಳಿಸಿದ್ದಾರೆ. ನಂತರ ಎಚ್ಚೆತ್ತುಕೊಂಡ ರಿಜ್ವಾನ್‌ ಸೈಬರ್‌ ಠಾಣೆಯ ಮೊರೆ ಹೋಗಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT