ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದನಕೆರೆ ದೊಡ್ಡಮ್ಮ-ದುರುಗಮ್ಮ ಜಾತ್ರೆ

Published 24 ಮೇ 2024, 5:17 IST
Last Updated 24 ಮೇ 2024, 5:17 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಹಂದನಕೆರೆ ಗ್ರಾಮದ ದುರುಗಮ್ಮ-ದೊಡ್ಡಮ್ಮನ ಜಾತ್ರೆ ಗುರುವಾರ ಸಂಭ್ರಮ-ಸಡಗರದಿಂದ ನಡೆಯಿತು.

ಸೋಮವಾರದಂದು ಹಂದನಕೆರೆಯ ಗ್ರಾಮದೇವತೆಗಳಾದ ದುರುಗಮ್ಮ-ದೊಡ್ಡಮ್ಮ ರಾಮಘಟ್ಟಕ್ಕೆ ತೆರಳಿ ಅಲ್ಲಿನ ಉತ್ಸವಾದಿ ಪೂಜೆಗಳನ್ನು ಪೂರೈಸಿ, ಮಂಗಳವಾರ ಹಂದನಕೆರೆಗೆ ಬಂದು ತಂಗುವ ದುರುಗಮ್ಮ-ದೊಡ್ಡಮ್ಮನಿಗೆ ಗ್ರಾಮದಲ್ಲಿ ಬಾನ-ಎಡೆ ಬಿಡಾರ ಅರ್ಪಿಸಲಾಯಿತು.

ಹೆಣ್ಣುಮಕ್ಕಳ ಬೇವಿನಸೀರೆ ಬಾಯಿ ಬೀಗದ ಹರಕೆ ತೀರಿಸಿದರು. ಮರೆವಣಿಗೆ, ರಾತ್ರಿ ದೇವಿಗೆ ‘ಘಟೆ’ ಅರ್ಪಣೆ ನಡೆಯಿತು.

ಬುಧವಾರ ಗಂಗಾಸ್ಥಾನ ಪ್ರಯುಕ್ತ ದುರುಗಮ್ಮನ ಸೋಮ ಹಾಗೂ ದೊಡ್ಡಮ್ಮನ ಸೋಮನ ಕುಣಿತದ ಜೊತೆ ಊರ ರಾಜಬೀದಿಗಳಲ್ಲಿ ರಾತ್ರಿಯಿಡೀ ಉತ್ಸವ ಬರುತ್ತದೆ. ಗುರುವಾರ ಸಿಡಿ ನಡೆಯಿತು. ಸಿಡಿ ಕಂಬಕ್ಕೆ ರಾಕ್ಷಸನ ಪ್ರತಿರೂಪವಾಗಿ ಮನುಷ್ಯನನ್ನು ಕಟ್ಟಿ ತಿರಗಿಸುವ ಸಿಡಿ ಕಾರ್ಯಕ್ರಮ ಜರುಗುತ್ತದೆ. ಗುರುವಾರ ಸಂಜೆ ಓಕುಳಿಯೊಂದಿಗೆ ಜಾತ್ರೆಗೆ ತರೆಬಿತ್ತು.

ಕರೆ-ಗುರಿ, ಬಂಡಿ-ಪಾನಕ, ಬಾರುಕೋಲು, ಕೊಳ್ಳಗಂಟೆಯಂತಹ ಕೃಷಿ ಮತ್ತು ಪಶು ಪಾಲನ ಕಸುಬುಗಳ ಆಚರಣೆಯಾಗಿರುವ ಹಂದನಕೆರೆ ಜಾತ್ರೆ ನಡೆಯಿತು.

ಸಿಡಿ ಗೆ ದೇವರನ್ನೇ ಕಟ್ಟಿ ತೂಗುತ್ತಿರುವುದು
ಸಿಡಿ ಗೆ ದೇವರನ್ನೇ ಕಟ್ಟಿ ತೂಗುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT