ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಣಿಗಲ್ | ಆರೋಗ್ಯ ಶಿಬಿರ: 6 ಸಾವಿರ ಜನರ ತಪಾಸಣೆ

Published 3 ಮಾರ್ಚ್ 2024, 14:13 IST
Last Updated 3 ಮಾರ್ಚ್ 2024, 14:13 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಹುಲಿಯೂರುದುರ್ಗದಲ್ಲಿ ಭಾನುವಾರ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಆರು ಸಾವಿರಕ್ಕೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆ ನಡೆಸಿ ಚಿಕಿತ್ಸೆ, ಔಷಧಿ ವಿತರಿಸಲಾಯಿತು.

500ಕ್ಕೂ ಹೆಚ್ಚು ಜನರಿಗೆ ಶಸ್ತ್ರಚಿಕಿತ್ಸೆಗೆ ಕ್ರಮತೆಗೆದುಕೊಳ್ಳಲಾಗಿದೆ.

ಬೆಂಗಳೂರಿನ ಜಯದೇವ ಆಸ್ಪತ್ರೆ, ಆದಿ ಚುಂಚನಗಿರಿ, ಆರ್.ಎನ್. ಚಾರಿಟಬಲ್ ಸಂಸ್ಥೆ ಮತ್ತು ವರಲಕ್ಷ್ಮಮ್ಮ ಚಾರಿಟಬಲ್ ಫೌಂಡೇಷನ್‌ನಿಂದ ಶಿಬಿರ ನಡೆಯಿತು.

ಜಯದೇವ ಆಸ್ಪತ್ರೆಯ ಡಾ.ನಟರಾಜ್ ಶೆಟ್ಟಿ ನೇತೃತ್ವದ ತಂಡ 550 ಹೃದ್ರೋಗಿಗಳ ತಪಾಸಣೆ ನಡೆಸಿ, 25ಕ್ಕೂ ಹೆಚ್ಚು ಮಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮತ್ತು ಆದಿ ಚುಂಚನಗಿರಿ ಆಸ್ಪತ್ರೆಯ ಡಾ.ನಿ.ಎನ್.ರವಿ ಡಿ.ನಾಗರಾಜಯ್ಯ ಅವರ ನೇತೃತ್ವದ ತಂಡದಲ್ಲಿ 80ಕ್ಕೂ ಹೆಚ್ಚು ವಿವಿಧ ತಜ್ಞ ವೈದ್ಯರ ತಂಡ 5,500 ಮಂದಿಯ ಆರೋಗ್ಯ ತಪಾಸಣೆ ನಡೆಸಿತು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವ ಆರೋಗ್ಯ ತಪಾಸಣಾ ಶಿಬಿರಗಳು ಮಾರಣಾಂತಿಕ ರೋಗಗಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಮಾಡಲು ಸಹಕಾರಿ. ಇದರ ಸದುಪಯೋಗ ಪಡೆದುಕೊಳ್ಳಬೇಕು. ವೈದ್ಯಕೀಯ ರಂಗದಲ್ಲಿ ಮಹತ್ತರ ಪ್ರಗತಿಯಾಗುತ್ತಿದ್ದು, ಸಕಾಲದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುವುದರ ಜತೆಗೆ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದು ಹೇಳಿದರು.

ಪಟ್ಟನಾಯಕನಹಳ್ಳಿಯ ನಂಜಾವಾಧೂತ ಸ್ವಾಮೀಜಿ, ಸಾಲುಮರದ ತಿಮ್ಮಕ್ಕ, ವರಲಕ್ಷ್ಮಮ್ಮ ಚಾರಿಟಬಲ್ ಸಂಸ್ಥೆ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT