ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ಸದ್ಭಾವನಾ ಫೌಂಡೇಷನ್‌ ಉದ್ಘಾಟನೆ

Published 28 ಜನವರಿ 2024, 5:17 IST
Last Updated 28 ಜನವರಿ 2024, 5:17 IST
ಅಕ್ಷರ ಗಾತ್ರ

ತುಮಕೂರು: ನಗರದ ಶ್ರೀನಗರದಲ್ಲಿ ಶನಿವಾರ ಸದ್ಭಾವನಾ ಫೌಂಡೇಷನ್‌ನ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಫೌಂಡೇಷನ್‌ ಉದ್ಘಾಟಿಸಿ ಮಾತನಾಡಿ, ‘ಬಡವರು, ಅಶಕ್ತರಿಗೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಸಹಾಯ ಹಾಗೂ ಕಾನೂನಾತ್ಮಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಫೌಂಡೇಷನ್‌ ನೆರವಾಗಲಿದೆ ಎಂಬ ವಿಶ್ವಾಸ ಇದೆ’ ಎಂದರು.

ಪ್ರಸ್ತುತ ವಿದ್ಯಾವಂತರಲ್ಲಿ ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿವೆ. ಇಂತಹ ಸಮಯದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದ ಕಾನೂನು ವಿದ್ಯಾರ್ಥಿಗಳು ಸೇರಿ ಸಮಾಜಕ್ಕೆ ನೆರವಾಗುವ ಉದ್ದೇಶದಿಂದ ಸಂಸ್ಥೆ ಕಟ್ಟಿದ್ದಾರೆ ಎಂದು ಹೇಳಿದರು.

ಹಿರಿಯ ನ್ಯಾಯಾಧೀಶ ಲುಂಕಪ್ಪ, ಶ್ರೀಕೃಷ್ಣ ಕಾನೂನು ಕಾಲೇಜು ಪ್ರಾಂಶುಪಾಲ ವಿನೆಟ್ ವಿಮಲ, ಗ್ರಾಮೀಣಾಭಿವೃದ್ಧಿ ಇಲಾಖೆ ಎಂಜಿನಿಯರ್ ಎಚ್‌.ಆರ್.ರಮೇಶ್, ಸದ್ಭಾವನಾ ಫೌಂಡೇಷನ್‌ ಗೌರವಾಧ್ಯಕ್ಷ ಎಚ್.ವಿ.ಪರಮೇಶ್‌, ಅಧ್ಯಕ್ಷ ಸೋಮಶೇಖರ ಅಲ್ಯಾಳ, ಉಪಾಧ್ಯಕ್ಷ ಜೆ.ಮುರುಳೀಧರ, ಕಾರ್ಯದರ್ಶಿ ಎಸ್‌.ಮುರಳಿ, ಖಜಾಂಚಿ ಎಚ್.ಜಿ.ನಾಗರಾಜು, ನಿರ್ದೇಶಕರಾದ ಎಂ.ಮಂಜುನಾಥ್‌, ದಯಾನಂದ ಸಾಗರ್, ಜಿ.ಎನ್.ನಿತಿನ್‌ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT