ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಿಗೇನಹಳ್ಳಿ | 13 ವರ್ಷದ ನಂತರ ನಡೆದ ಕಾಳೇನಹಳ್ಳಿ ಜಾತ್ರೆಗೆ ಭರ್ಜರಿ ಖರ್ಚು

Published 16 ಮೇ 2024, 13:36 IST
Last Updated 16 ಮೇ 2024, 13:36 IST
ಅಕ್ಷರ ಗಾತ್ರ

ಕೊಡಿಗೇನಹಳ್ಳಿ: ಹೋಬಳಿಯ ಕಾಳೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ವಿಜೃಂಭಣೆಯ ಆಂಜನೇಯ, ಶ್ರೀರಾಮಚಂದ್ರ ಹಾಗೂ ಮಹೇಶ್ವರಮ್ಮ ಜಾತ್ರಾ ಮಹೋತ್ಸವ ನಡೆಯಿತು.

ಗ್ರಾಮದಲ್ಲಿ 267 ಮನೆಗಳಿದ್ದು, ಇಲ್ಲಿನ ಬಹುತೇಕ ಜನರು ಬೇಸಾಯ ಹಾಗೂ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿ 12ರಿಂದ 13 ವರ್ಷಗಳ ನಂತರ ನಡೆಯುವ ಈ ಜಾತ್ರೆಯಲ್ಲಿ ಗ್ರಾಮಸ್ಥರೆಲ್ಲರೂ ಹೆಚ್ಚು ಖರ್ಚು ಮಾಡಿದ್ದಾರೆ. ಮನೆಯಲ್ಲಿ ತರಹೇವಾರಿ ಸಸ್ಯಹಾರ ಹಾಗೂ ಮಾಂಸಾಹಾರದ ಖಾದ್ಯಗಳನ್ನು ಮಾಡಿ ಬಡಿಸಿದ್ದಾರೆ.

ಸುಣ್ಣ, ಬಣ್ಣಗಳಿಂದ ಮನೆಯನ್ನು ಶೃಂಗರಿಸಿದ್ದಲ್ಲದೆ ಮನೆಗೆ ಅಗತ್ಯ ಪೀಠೋಪಕರಣಗಳನ್ನು ಖರೀದಿಸಿದ್ದಾರೆ. ಒಡವೆ, ವಸ್ತ್ರಗಳಿಗಳನ್ನು ಖರೀದಿಸಿ ಸಂಭ್ರಮಿಸಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರೆಲ್ಲರೂ ಸೇರಿ ಒಗ್ಗಟ್ಟಿನಿಂದ ಹಬ್ಬವನ್ನು ಮಾಡಿದ್ದಾರೆ.

16.05.24TMK-KOD-2 ಕಾಳೇನಹಳ್ಳಿ ಗ್ರಾಮದಲ್ಲಿ ನಡೆದ ಹೂವಿನ ರಥೋತ್ಸವ.
16.05.24TMK-KOD-2 ಕಾಳೇನಹಳ್ಳಿ ಗ್ರಾಮದಲ್ಲಿ ನಡೆದ ಹೂವಿನ ರಥೋತ್ಸವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT