ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮರ ಸ್ಮರಣೆ

Published 31 ಜನವರಿ 2024, 3:08 IST
Last Updated 31 ಜನವರಿ 2024, 3:08 IST
ಅಕ್ಷರ ಗಾತ್ರ

ತುಮಕೂರು: ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್‍ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಗಾಂಧೀಜಿ, ಇಂದಿರಾ ಗಾಂಧಿ, ರಾಜೀವ್‍ ಗಾಂಧಿ ಭಾವಚಿತ್ರಗಳಿಗೆ ಪುಪ್ಪ ನಮನ ಸಲ್ಲಿಸಲಾಯಿತು. ಮೂವರು ನಾಯಕರ ಜೀವನ, ಸಾಧನೆ, ತತ್ವಾದರ್ಶಗಳನ್ನು ನೆನೆದು ಗೌರವ ಸಲ್ಲಿಸಿದರು.

ನಗರಸಭೆ ಮಾಜಿ ಸದಸ್ಯ ನರಸೀಯಪ್ಪ, ‘ವರ್ಣಾಶ್ರಮ ವ್ಯವಸ್ಥೆಯಿಂದ ದೇಶ ನಲುಗಿದ್ದು, ಇದರಿಂದ ಹೊರ ಬರಬೇಕಾದರೆ ಬಿ.ಆರ್.ಅಂಬೇಡ್ಕರ್ ಅವರ ಸಮಪಾಲು, ಸಮಬಾಳು ಎಂಬ ಸಂವಿಧಾನವೊಂದೇ ದಾರಿಯಾಗಿದೆ’ ಎಂದು ಹೇಳಿದರು.

ಟೂಡಾ ಮಾಜಿ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ, ‘ಬ್ರಿಟಿಷರ ಜತೆ ಶಾಮೀಲಾಗಿ ಸ್ವಾತಂತ್ರ್ಯ ಹೋರಾಟದ ದಿಕ್ಕು ತಪ್ಪಿಸಲು ಹೊರಟವರು, ಇಂದು ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ದೇಶದ ಜನರನ್ನು ಧರ್ಮ, ದೇವರ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

ಮುಖಂಡ ಕೆಂಚಮಾರಯ್ಯ, ‘ಶ್ರೀರಾಮನ ಹೆಸರಿನಲ್ಲಿ ಬಿಜೆಪಿ, ಆರ್‌ಎಸ್ಎಸ್ ನವರು ಮಾಡಬಾರದ ಕೆಲಸ ಮಾಡಿ, ದೇಶವನ್ನು ಹಿಬ್ಬಾಗಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸಿಗರದ್ದು ಶ್ರೀರಾಮ್ ಆದರೆ, ಬಿಜೆಪಿಯವರದ್ದು ನಾಥೂರಾಮ್’ ಎಂದು ಟೀಕಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌ಗೌಡ, ‘ಕಾಂಗ್ರೆಸ್ ಪಕ್ಷ ಅಭಿವೃದ್ಧಿಪಡಿಸಿದ ಶಾಲೆ, ಕಾಲೇಜುಗಳಲ್ಲಿ ಓದಿ, ಪದವಿ ಪಡೆದವರು ಇಂದು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ. ಶ್ರೀರಾಮನ ಹೆಸರಿನಲ್ಲಿ ಜನರನ್ನು ಸಾಲದ ಕೂಪಕ್ಕೆ ದೂಡುತ್ತಿರುವ ಬಿಜೆಪಿಯವರ ಹುನ್ನಾರವನ್ನು ಜನರಿಗೆ ತಿಳಿಸಬೇಕು’ ಎಂದು ಸಲಹೆ ಮಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಮುಖಂಡರಾದ ಸಂಜೀವ ಕುಮಾರ್, ರೇವಣ್ಣ ಸಿದ್ದಯ್ಯ, ನಟರಾಜ ಶೆಟ್ಟಿ, ಷಣ್ಮುಖಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್, ಫಯಾಜ್, ನರಸಿಂಹಮೂರ್ತಿ, ಮುಖಂಡರಾದ ಸುಜಾತ, ಕೆಂಪಣ್ಣ, ಸುಲ್ತಾನ್ ಮೊಹಮದ್, ಶಿವಾಜಿ, ಕೈದಾಳ ರಮೇಶ್, ಅಸ್ಲಾಂಪಾಷ, ನ್ಯಾತೇಗೌಡ, ಕವಿತಾ, ಮಂಗಳ, ಕುತ್ಬುದ್ದೀನ್, ರಘು, ಭಾಗ್ಯ, ವಸುಂದರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT