ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಸೊಪ್ಪು, ಶುಂಠಿ, ಮೆಣಸಿನಕಾಯಿ ದುಬಾರಿ

ಪಾಮಾಯಿಲ್ ಏರಿಕೆ; ಕುಸಿದ ಮೆಣಸು, ಜೀರಿಗೆ; ಕೋಳಿ ಮಾಂಸ ಅಗ್ಗ
Published 10 ಮಾರ್ಚ್ 2024, 4:26 IST
Last Updated 10 ಮಾರ್ಚ್ 2024, 4:26 IST
ಅಕ್ಷರ ಗಾತ್ರ

ತುಮಕೂರು: ಈ ವಾರ ಸೊಪ್ಪಿನ ಬೆಲೆ ಗಗನಮುಖಿಯಾಗಿದ್ದು, ಸೌತೆಕಾಯಿ, ನಿಂಬೆ ಹಣ್ಣು, ಶುಂಠಿ ಮತ್ತಷ್ಟು ದುಬಾರಿಯಾಗಿದೆ. ಪಾಮಾಲಿಯಲ್ ಧಾರಣೆ ಹೆಚ್ಚಳವಾಗಿದ್ದು, ಕಾಳು ಮೆಣಸು, ಜೀರಿಗೆ ಅಲ್ಪ ಇಳಿಕೆಯಾಗಿದೆ.

ಮೆಣಸಿನಕಾಯಿ ಖಾರ: ಹಸಿರು ಮೆಣಸಿನ ಕಾಯಿ ಮತ್ತಷ್ಟು ಖಾರವಾಗಿದ್ದು, ಕೆ.ಜಿ ₹50–60ಕ್ಕೆ ಏರಿಕೆಯಾಗಿದೆ. ಕ್ಯಾಪ್ಸಿಕಂ ಸಹ ದುಬಾರಿಯಾಗಿದೆ. ಕಳೆದ ಕೆಲ ವಾರಗಳಿಂದ ಇಳಿಕೆಯತ್ತ ಮುಖಮಾಡಿರುವ ಬೆಳ್ಳುಳ್ಳಿ ದರ ಈ ವಾರ ಮತ್ತಷ್ಟು ಕಡಿಮೆಯಾಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ, ನಿಂಬೆ ಹಣ್ಣು ದರ ಏರಿಕೆಯಾಗಿದೆ. ಶುಂಠಿ ಸಹ ದುಬಾರಿಯಾಗಿದೆ. ನುಗ್ಗೇಕಾಯಿ ಬೆಲೆ ತೀವ್ರವಾಗಿ ಕುಸಿದಿದ್ದು, ಎಲೆಕೋಸು, ತೊಂಡೆಕಾಯಿ ಅಲ್ಪ ಹೆಚ್ಚಳವಾಗಿದೆ. ಜತೆಗೆ ಟೊಮೆಟೊ ದರ ಕೊಂಚ ಚೇತರಿಕೆ ಕಂಡಿದೆ.

ಸೊಪ್ಪು ದುಬಾರಿ: ಬೇಸಿಗೆಯಲ್ಲಿ ಸೊಪ್ಪು ಬೆಳೆಯುವುದು ಕಡಿಮೆಯಾಗಿದ್ದು, ಜನರ ಕೈಗೆಟುಕದಷ್ಟು ದುಬಾರಿಯಾಗಿದೆ. ಬಿಸಿಲ ಝಳಕ್ಕೆ ಸೊಪ್ಪು ಬಾಡಿ ಹೋಗುತ್ತಿದ್ದು, ಬೆಳೆ ಕೈಗೆ ಸಿಗದಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಕೊತ್ತಂಬರಿ, ಸಬ್ಬಕ್ಕಿ ಸೊಪ್ಪು ಒಮ್ಮೆಲೆ ದುಪ್ಪಟ್ಟಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹60–70, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹40ಕ್ಕೆ ಏರಿಕೆಯಾಗಿದೆ.

ಹಣ್ಣು ಯಥಾಸ್ಥಿತಿ: ಹಣ್ಣು ಧಾರಣೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದಿಲ್ಲ. ದಾಳಿಂಬೆ ಹಣ್ಣು ಈ ವಾರವೂ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಲ್ಲಂಗಡಿ ಹಣ್ಣು ದರ ಕೊಂಚ ಕಡಿಮೆಯಾಗಿದೆ.

ಪಾಮಾಯಿಲ್ ಏರಿಕೆ: ಅಡುಗೆ ಎಣ್ಣೆಯಲ್ಲಿ ಪಾಮಾಯಿಲ್ ಒಮ್ಮೆಲೆ ದುಬಾರಿಯಾಗಿದ್ದು, ಕೆ.ಜಿಗೆ ₹10–15 ಹೆಚ್ಚಳವಾಗಿದ್ದು, ಕಡಲೆಕಾಯಿ ಎಣ್ಣೆ ಕೆ.ಜಿಗೆ ₹5 ಕಡಿಮೆಯಾಗಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹110, ಪಾಮಾಯಿಲ್ ಕೆ.ಜಿ ₹98, ಕಡಲೆಕಾಯಿ ಎಣ್ಣೆ ಕೆ.ಜಿ ₹150ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬೇಳೆ, ಧಾನ್ಯ: ತೊಗರಿ ಬೇಳೆ ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಹೆಸರು ಬೇಳೆ ಅಲ್ಪ ಹೆಚ್ಚಳವಾಗಿದ್ದರೆ, ಬಟಾಣಿ ಕೊಂಚ ಇಳಿದಿದೆ. ಸಕ್ಕರೆ ದರ ಸಹ ತುಸು ಕಡಿಮೆಯಾಗಿದೆ.

ಮೆಣಸು ಇಳಿಕೆ: ತೀವ್ರವಾಗಿ ಏರಿಕೆ ಕಂಡಿದ್ದ ಕಾಳು ಮೆಣಸು, ಜೀರಿಗೆ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಮೆಂತ್ಯ, ಗಸಗಸೆ ಅಲ್ಪ ಏರಿಕೆಯಾಗಿದೆ. ಒಣ ಹಣ್ಣುಗಳು ಮತ್ತಷ್ಟು ದುಬಾರಿಯಾಗುವಂತೆ ಕಾಣುತ್ತಿವೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹300–320, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹220–230, ಹುಣಸೆಹಣ್ಣು ₹120–160, ಕಾಳುಮೆಣಸು ಕೆ.ಜಿ ₹620–650, ಜೀರಿಗೆ ಕೆ.ಜಿ ₹360–380, ಸಾಸಿವೆ ಕೆ.ಜಿ ₹85–90, ಮೆಂತ್ಯ ಕೆ.ಜಿ ₹95–100, ಚಕ್ಕೆ ಕೆ.ಜಿ ₹250–270, ಲವಂಗ ಕೆ.ಜಿ ₹900–950, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,350, ಬಾದಾಮಿ ಕೆ.ಜಿ ₹600–650, ಗೋಡಂಬಿ ಕೆ.ಜಿ ₹600–650, ಒಣದ್ರಾಕ್ಷಿ ಕೆ.ಜಿ ₹190–200ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಕೆಲ ವಾರಗಳಿಂದ ಇಳಿಕೆಯತ್ತ ಮುಖಮಾಡಿದ್ದ ಕೋಳಿ ಮಾಂಸದ ಬೆಲೆ ಈ ವಾರವೂ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹200, ಸ್ಕಿನ್‌ಲೆಸ್ ಕೆ.ಜಿ ₹220, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹100ಕ್ಕೆ ಇಳಿಕೆಯಾಗಿದೆ.

ಮೀನು: ಸಮುದ್ರ ಮೀನಿನ ದರದಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ. ಬಂಗುಡೆ ಕೆ.ಜಿ ₹230, ಅಂಜಲ್ ಕೆ.ಜಿ ₹960, ಕಪ್ಪುಮಾಂಜಿ ಕೆ.ಜಿ ₹900, ಇಂಡಿಯನ್ ಸಾಲ್ಮನ್ ಕೆ.ಜಿ ₹900, ಸೀಗಡಿ ಕೆ.ಜಿ ₹490–780, ಏಡಿ ಕೆ.ಜಿ 650ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

******

ಹಣ್ಣು (ಬೆಲೆ ಕೆ.ಜಿ ₹)

ಸೇಬು;230

ದಾಳಿಂಬೆ;180

ಮೂಸಂಬಿ;80

ಕಿತ್ತಳೆ;60

ಸಪೋಟ;100

ಏಲಕ್ಕಿ ಬಾಳೆ;60

ಪಚ್ಚಬಾಳೆ;30

ಸೀಬೆ;100

ಪೈನಾಪಲ್;80

ಪಪ್ಪಾಯ;30

ಕರಬೂಜ;50

ಕಲ್ಲಂಗಡಿ;25

ದ್ರಾಕ್ಷಿ;50

******

ಧಾನ್ಯ (ಬೆಲೆ ಕೆ.ಜಿ ₹) (ಮಂಡಿಪೇಟೆ)

ತೊಗರಿ ಬೇಳೆ;145–160

ಕಡಲೆ ಬೇಳೆ;78–85

ಉದ್ದಿನ ಬೇಳೆ;140–150

ಹೆಸರು ಬೇಳೆ;115–120

ಕಡಲೆಕಾಳು;75–80

ಹೆಸರು ಕಾಳು;120–125

ಅಲಸಂದೆ;95–100

ಅವರೆಕಾಳು;110–130

ಹುರುಳಿಕಾಳು;75–80

ಹುರಿಗಡಲೆ;80–90

ಬಟಾಣಿ;95–100

ಕಡಲೆ ಬೀಜ;120–125

ಗೋಧಿ;42–48

ಸಕ್ಕರೆ;39–40

**

ತರಕಾರಿ (ಬೆಲೆ ಕೆ.ಜಿ ₹) (ಅಂತರಸನಹಳ್ಳಿ ಮಾರುಕಟ್ಟೆ)

ಬೀನ್ಸ್;30–40

ಕ್ಯಾರೇಟ್;30–40

ಬೀಟ್ರೂಟ್‌;30–35

ಈರುಳ್ಳಿ;25–30

ಬೆಳ್ಳುಳ್ಳಿ;180–200

ಟೊಮೆಟೊ;15–20

ಆಲೂಗಡ್ಡೆ;25–30

ಗೆಡ್ಡೆಕೋಸು;15–20

ಮೂಲಂಗಿ;20–25

ಬೆಂಡೆಕಾಯಿ;30–40

ಬದನೆಕಾಯಿ;15–20

ಎಲೆಕೋಸು;20–25

ಹೂಕೋಸು(1ಕ್ಕೆ);20–30

ತೊಂಡೆಕಾಯಿ;30–40

ಹಾಗಲಕಾಯಿ;30–40

ನುಗ್ಗೆಕಾಯಿ;30–40

ಮೆಣಸಿನಕಾಯಿ;50–60

ಕ್ಯಾಪ್ಸಿಕಂ;40–50

ಶುಂಠಿ;100–120

ಸೌತೆಕಾಯಿ 1ಕ್ಕೆ;8–10

ನಿಂಬೆಹಣ್ಣು 1ಕ್ಕೆ;6–7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT