ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ನಿಟ್ಟೂರು, ಹುಳಿಯಾರಿನಲ್ಲಿ 7 ಸೆಂ.ಮೀ ಮಳೆ

ಪಾವಗಡ, ಮಧುಗಿರಿಯಲ್ಲಿ ಸಾಧಾರಣ ಮಳೆ
Published 4 ಜೂನ್ 2024, 2:19 IST
Last Updated 4 ಜೂನ್ 2024, 2:19 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬಿರುಸು ಪಡೆದುಕೊಂಡಿದ್ದು, ಭಾನುವಾರ ರಾತ್ರಿ ಸಹ ಉತ್ತಮ ಮಳೆಯಾಗಿದೆ. ಆದರೆ ಯಾವುದೇ ಹಾನಿ, ಅನಾಹುತಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಪಾವಗಡ, ಮಧುಗಿರಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಮಾತ್ರ ಮಳೆಯಾಗಿದ್ದರೆ, ಉಳಿದ ತಾಲ್ಲೂಕಿನಲ್ಲಿ ಜೋರಾಗಿ ಬಿದ್ದಿದೆ. ನಿಟ್ಟೂರು, ಹಳಿಯಾರು, ಹಾಗಲವಾಡಿ ಭಾಗದಲ್ಲಿ ತಲಾ 7 ಸೆಂ.ಮೀ, ಚೇಳೂರು, ಬುಕ್ಕಾಪಟ್ಟಣದಲ್ಲಿ ತಲಾ 6 ಸೆಂ.ಮೀ, ಹುಲಿಯೂರುದುರ್ಗ, ಸಂಪಿಗೆ, ಕೋಳಾಲದಲ್ಲಿ ತಲಾ 5 ಸೆಂ.ಮೀ ಮಳೆ ಸುರಿದಿದೆ.

ಜಿಲ್ಲೆಯ ವಿವಿಧೆಡೆ ಕಳೆದ 24 ಗಂಟೆಗಳಲ್ಲಿ (ಸೋಮವಾರ ಬೆಳಿಗ್ಗೆ ವರೆಗೆ) ಬಿದ್ದ ಮಳೆ ವಿವರ (ಮಿ.ಮೀ).

ತುಮಕೂರು 19 ಮಿ.ಮೀ, ಹೆಬ್ಬೂರು 6.8, ಊರ್ಡಿಗೆರೆ 10, ಬೆಳ್ಳಾವಿ 21, ಹಿರೇಹಳ್ಳಿ 6.8, ನೆಲಹಾಳ್ 42, ಗುಬ್ಬಿ 32, ಸಿ.ಎಸ್.ಪುರ 40, ನಿಟ್ಟೂರು 78.4, ಕಡಬ 42, ಹಾಗಲವಾಡಿ 75, ಚೇಳೂರು 66, ಅಂಕಸಂದ್ರ 25, ಕುಣಿಗಲ್ 8, ನಿಡಸಾಲೆ 22, ಕೆ.ಎಚ್.ಹಳ್ಳಿ 23, ಅಮೃತೂರು 22, ಮಾರ್ಕೋನಹಳ್ಳಿ 14, ಹುಲಿಯೂರುದುರ್ಗ 55, ತಿಪಟೂರು 34.5, ಕಿಬ್ಬನಹಳ್ಳಿ 20, ನೊಣವಿನಕೆರೆ 6, ಹೊನ್ನವಳ್ಳಿ 17, ಹಾಲ್ಕುರಿಕೆ 11, ಚಿಕ್ಕನಾಯಕನಹಳ್ಳಿ 30, ಮತ್ತಿಘಟ್ಟ 31, ದೊಡ್ಡಎಣ್ಣೆಗೆರೆ 21.7, ಹುಳಿಯಾರು 78.4, ಬೋರನಕಣಿವೆ 27.6, ಶೆಟ್ಟಿಕೆರೆ 8, ಸಿಂಗದಹಳ್ಳಿ 44 ಮಿ.ಮೀ ಮಳೆ ಬಿದ್ದಿದೆ.

ತುರುವೇಕೆರೆ 15.6, ಸಂಪಿಗೆ 51, ದಂಡಿನಶಿವರ 5.8, ಮಾಯಸಂದ್ರ 6, ದಬ್ಬೇಘಟ್ಟ 5, ಮಧುಗಿರಿ 7, ಬಡವನಹಳ್ಳಿ 12, ಬ್ಯಾಲ್ಯ 18, ಶಿರಾ 38, ಚಿಕ್ಕನಹಳ್ಳಿ 20.6, ಕಳ್ಳಂಬೆಳ್ಳ 13, ಬುಕ್ಕಾಪಟ್ಟಣ 61, ತಾವರೆಕೆರೆ 6, ಬರಗೂರು 25, ಹುಣಸೇಹಳ್ಳಿ 19, ಕೊರಟಗೆರೆ 30, ಕೋಳಾಲ 51, ಹೊಳವನಹಳ್ಳಿ 6.8, ಮಾವತ್ತೂರು 9.8, ಇರಕಸಂದ್ರ 26, ತೋವಿನಕೆರೆ 6.6, ಪಾವಗಡ ತಾಲ್ಲೂಕು ಅರಸೀಕೆರೆ 9, ವೈ.ಎನ್‌.ಹೊಸಕೋಟೆ 10 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT