ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಓಬವ್ವ ಮಹಿಳಾ ಕುಲಕ್ಕೆ ಮಾದರಿ: ವಿದ್ವಾನ್‌ ಲಕ್ಷಣದಾಸ್‌

Published 18 ಡಿಸೆಂಬರ್ 2023, 5:32 IST
Last Updated 18 ಡಿಸೆಂಬರ್ 2023, 5:32 IST
ಅಕ್ಷರ ಗಾತ್ರ

ತುಮಕೂರು: ಒನಕೆ ಓಬವ್ವ ಕೇವಲ ಛಲವಾದಿ ಸಮುದಾಯಕ್ಕಲ್ಲ, ಇಡೀ ಮಹಿಳಾ ಕುಲಕ್ಕೆ ಮಾದರಿ ಎಂದು ಹರಿಕಥಾ ವಿದ್ವಾನ್‌ ಲಕ್ಷಣದಾಸ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ಒನಕೆ ಓಬವ್ವ ಮಹಿಳಾ ಬಳಗ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ. ಸೇನೆ ಸೇರಿದಂತೆ ಎಲ್ಲ ಕಡೆಗಳಲ್ಲಿ ಮಹಿಳೆಯರು ಯಶಸ್ಸು ಸಾಧಿಸಿದ್ದಾರೆ. ಆದರೆ, ಯಾವುದೇ ಶಿಕ್ಷಣವಿಲ್ಲದೆ, ಲೋಕಾರೂಢಿಯಿಂದ ಬಂದ ಜ್ಞಾನ ಉಪಯೋಗಿಸಿ, ಒನಕೆಯನ್ನೇ ಅಸ್ತ್ರವಾಗಿಸಿ, ನೂರಾರು ಎದುರಾಳಿ ಸೈನಿಕರನ್ನು ಸೆದೆ ಬಡಿದ ಒನಕೆ ಓಬವ್ವನ ಯುಕ್ತಿ ಮತ್ತು ಭಕ್ತಿಯನ್ನು ನಾವೆಲ್ಲರೂ ಮೆಚ್ಚಲೇಬೇಕು ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ, ‘ಒನಕೆ ಓಬವ್ವ ಜಯಂತಿ ಕೇವಲ ಸಾಂಕೇತಿಕ ಕಾರ್ಯಕ್ರಮವಾಗದೆ, ತತ್ವ ಸಿದ್ಧಾಂತ ಸಾರುವ ಕಾರ್ಯಕ್ರಮವಾಗಬೇಕು’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ, ‘ಸರ್ಕಾರ ಒನಕೆ ಓಬವ್ವನ ಹೆಸರಿನಲ್ಲಿ ಶಾಲಾ, ಕಾಲೇಜು ತೆರೆದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಬೇಕು. ಓಬವ್ವನ ಸಮಯಪ್ರಜ್ಞೆ, ಧೈರ್ಯ, ಸಾಹಸವನ್ನು ಮೈಗೂಡಿಸಿ ಕೊಳ್ಳುವಂತೆ ಮಾಡಬೇಕು’ ಎಂದು ಸಲಹೆ ಮಾಡಿದರು.

ಮಹಾನಗರ ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ, ಒನಕೆ ಓಬವ್ವ ಮಹಿಳಾ ಬಳಗದ ಎಂ.ಆರ್‌.ವಿಜಯಲಕ್ಷ್ಮಿ, ಮುಖಂಡರಾದ ಇಕ್ಬಾಲ್‌ ಅಹ್ಮದ್‌, ಬಿ.ಎಸ್.ಮಂಜುಳಾ, ಬಿ.ಜಿ.ಲಿಂಗರಾಜು, ಪಿ.ಚಂದ್ರಪ್ಪ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT