ತುಮಕೂರು ವಿ.ವಿಯ ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿ ವೀಕ್ಷಣೆಗೆ ಮುಕ್ತ

7

ತುಮಕೂರು ವಿ.ವಿಯ ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿ ವೀಕ್ಷಣೆಗೆ ಮುಕ್ತ

Published:
Updated:
Deccan Herald

ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಡಾ.ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ಗ್ಯಾಲರಿಯೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ ಎಂದು ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ತಿಳಿಸಿದರು.

ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಅಂಗವಾಗಿ ತುಮಕೂರು ವಿವಿಯ ಭಾರತರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಲಲಿತ ಕಲಾ ವಿಭಾಗ ಏರ್ಪಡಿಸಿದ್ದ ವಿದ್ಯಾರ್ಥಿಗಳ ಸಾಮೂಹಿಕ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತುಮಕೂರು ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು ಸಾಹಿತ್ಯ, ರಂಗಭೂಮಿ ಕಲೆಗಳಿಗೆ ಹೆಸರಾಗಿದೆ. ನಾಡಿನ ಸಾಂಸ್ಕೃತಿಕ ಕೇಂದ್ರವಾಗಿರುವ ತುಮಕೂರಿನ ಕಲಾವಿದರು, ಚಿತ್ರಕಲಾ ಪ್ರೇಮಿಗಳು ಹಾಗೂ ಸಹೃದಯರಿಗಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕಲಾ ಗ್ಯಾಲರಿಯು ಬೆಳಗ್ಗೆ 6ರಿಂದ 9 ವರೆಗೆ ಹಾಗೂ ಸಂಜೆ 5 ರಿಂದ 7ಗಂಟೆವರೆಗೆ ತೆರೆದಿರುತ್ತದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು ಎಂದರು.

ಲಲಿತ ಕಲಾ ವಿಭಾಗದ ಮುಖ್ಯಸ್ಥ ಬಿ. ಕರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಡಾ.ಟಿ.ವಿ.ವೆಂಕಟೇಶ, ಅಧ್ಯಾಪಕ ಜಿತೇಂದ್ರ, ಹಜರತ್ ಅಲಿ, ಗ್ಯಾಲರಿಯ ನಿರ್ವಾಹಕ ಡಾ.ಎಂ.ವೈ.ರಾಜೀವ್  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !