ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಟ್‌ ಟೈಮ್‌ ಕೆಲಸದ ಆಮಿಷ: ₹ 23 ಲಕ್ಷ ಕಳೆದುಕೊಂಡ ಬ್ಯಾಂಕ್‌ ಉದ್ಯೋಗಿ!

Published 17 ಮಾರ್ಚ್ 2024, 15:26 IST
Last Updated 17 ಮಾರ್ಚ್ 2024, 15:26 IST
ಅಕ್ಷರ ಗಾತ್ರ

ತುಮಕೂರು: ಡಿಸಿಸಿ ಬ್ಯಾಂಕ್‌ನ ಮಹಿಳಾ ಉದ್ಯೋಗಿಯೊಬ್ಬರು ಪಾರ್ಟ್‌ ಟೈಮ್‌ ಕೆಲಸದ ಆಮಿಷಕ್ಕೆ ಒಳಗಾಗಿ ₹ 23.65 ಲಕ್ಷ ಕಳೆದುಕೊಂಡಿದ್ದಾರೆ.

ಮಾರ್ಚ್‌ 1ರಂದು ಮಹಿಳೆಗೆ ಮೆಸೇಜ್‌ ಮಾಡಿದ ಸೈಬರ್‌ ವಂಚಕರು ಪಾರ್ಟ್‌ ಟೈಮ್‌ ಕೆಲಸದ ಬಗ್ಗೆ ತಿಳಿಸಿದ್ದಾರೆ. ಸ್ಟಾರ್‌ ರೇಟಿಂಗ್‌, ಪ್ರೀಪೈಡ್‌ ಟ್ರೇಡಿಂಗ್‌ ಕೆಲಸದಲ್ಲಿ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ನಂತರ ಟೆಲಿಗ್ರಾಂ ಮೂಲಕ ವಿವಿಧ ಶಾಪಿಂಗ್‌ ಮಾಲ್‌ಗಳ ಲಿಂಕ್‌ ಕಳುಹಿಸಿ ರೇಟಿಂಗ್‌ ನೀಡುವಂತೆ ಹೇಳಿದ್ದಾರೆ. ಜತೆಗೆ ಪ್ರೀಪೈಡ್‌ ಟ್ರೇಡಿಂಗ್‌ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ.

‘ಈಗಾಗಲೇ ನಿಮ್ಮ ಟ್ರೇಡಿಂಗ್‌ ಖಾತೆಯಲ್ಲಿ ₹ 40 ಲಕ್ಷ’ ಇದೆ ಎಂದು ತಿಳಿಸಿದ್ದಾರೆ. ಇದನ್ನು ನಂಬಿದ ಮಹಿಳೆ ಮಾರ್ಚ್‌ 4ರಿಂದ 11ರ ವರೆಗೆ ₹ 12.17 ಲಕ್ಷ ಹಣ ವಿವಿಧ ಯುಪಿಐ ಐ.ಡಿ ಮತ್ತು ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದಕ್ಕೆ ಲಾಭವಾಗಿ ₹ 2,200 ಹಣವನ್ನು ಮಹಿಳೆಯ ಖಾತೆಗೆ ಪಾವತಿಸಿದ್ದಾರೆ. ಮಹಿಳೆ ನಂತರ ಇದೇ ರೀತಿ ಮತ್ತೆ ₹11,72,803 ಹಣ ಹಾಕಿದ್ದಾರೆ. ಮಹಿಳೆಯ ಖಾತೆಗೆ ಕೇವಲ ₹11,750 ಮಾತ್ರ ವಾಪಸ್‌ ವರ್ಗಾವಣೆ ಮಾಡಿದ್ದಾರೆ. ಹೂಡಿಕೆ ಮಾಡಿದ ಹಣ ವಾಪಸ್‌ ನೀಡುವಂತೆ ಕೇಳಿದಾಗ ಮತ್ತಷ್ಟು ಹಣ ವರ್ಗಾವಣೆ ಮಾಡಿ, ಇನ್ನೂ ಹೆಚ್ಚಿನ ಲಾಭ ಗಳಿಸಬಹುದು’ ಎಂದು ಹೇಳಿದ್ದಾರೆ.

ಇದರಿಂದ ಅನುಮಾನಗೊಂಡ ಮಹಿಳೆ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT