ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಕ್ಕಲೆಬ್ಬಿಸುವ ಹುನ್ನಾರ: ಕೊರಟಿ ಹೊನ್ನಮಾಚನಹಳ್ಳಿಗೆ ಪೊಲೀಸರ ಭೇಟಿ

Published 19 ಮೇ 2024, 6:44 IST
Last Updated 19 ಮೇ 2024, 6:44 IST
ಅಕ್ಷರ ಗಾತ್ರ

ಕುಣಿಗಲ್: ತಾಲ್ಲೂಕಿನ ಕೊರಟಿ ಹೊನ್ನಮಾಚನಹಳ್ಳಿ ಗ್ರಾಮದಲ್ಲಿ 40 ವರ್ಷಗಳಿಂದ ವಾಸಿಸುತ್ತಿರುವ ಶಿಳ್ಳೆಕ್ಯಾತ ಕುಟುಂಬಗಳನ್ನು ಒಕ್ಕೆಲೆಬ್ಬಿಸಲು ಕೆಲವರು ಶುಕ್ರವಾರ ಪ್ರಯತ್ನ ನಡೆದಿದೆ ಎಂಬ ಆರೋಪದ ಮೇಲೆ  ಶನಿವಾರ ಡಿವೈಎಸ್‌ಪಿ ಓಂ ಪ್ರಕಾಶ್, ಸಿಪಿಐ ಮಾದ್ಯಾನಾಯಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೊರಟಿ ಹೊನ್ನಮಾಚನಹಳ್ಳಿ ಸಮೀಪ ಶಿಳ್ಳೆಕ್ಯಾತ ಸಮುದಾಯದ 25ಕ್ಕೂ ಹೆಚ್ಚು ಕುಟುಂಬದವರು ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದ್ದು, ಪುರುಷರು ಬೀದಿ ಬದಿ ವ್ಯಾಪಾರಕ್ಕೆ ತೆರಳಿದ ಸಮಯದಲ್ಲಿ ಬಂದ ಕೆಲವರು ಕಲ್ಲಿನ ಕಂಬ ನೆಟ್ಟು, ಜಾಗ ತೆರವು ಮಾಡಲು ಸೂಚನೆ ನೀಡಿದ ಸಮಯದಲ್ಲಿ ವಾಗ್ವಾದ ನಡೆದು ಮಹಿಳೆಯರ ಮೇಲೆ ಹಲ್ಲೆ ನಡೆಲಾಗಿತ್ತು.

ಪತ್ರಿಕೆಗಳಲ್ಲಿ ವರದಿಯಾದ ನಂತರ ಶನಿವಾರ ಡಿವೈಎಸ್‌ಪಿ ಓಂ ಪ್ರಕಾಶ್, ಸಿಪಿಐ ಮಾದ್ಯಾನಾಯಕ್ ಮತ್ತು ಪಿಎಸ್ಐ ಪ್ರಶಾಂತ್ ತಂಡ ಭೇಟಿ ನೀಡಿ ಎರಡು ಗುಂಪಿನ ಪ್ರಮುಖರೊಂದಿಗೆ ಚರ್ಚೆ ನಡೆಯುತ್ತಿದ್ದಾಗ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡುತ್ತಿದ್ದವರ ಮೇಲೆ ಕೆಲವರು ಮೊಬೈಲ್ ಕಸಿದು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.

ಅಧಿಕಾರಿಗಳು ಪರಿಸ್ಥಿತಿ ನಿಯಂತ್ರಿಸಿ, ಮಾಹಿತಿ ಪಡೆದು ತಹಶೀಲ್ದಾರ್‌ ಅವರನ್ನು ಸಂಪರ್ಕಿಸಿ ಸರ್ವೆ ಮಾಡುವ ಮೂಲಕ ಸ್ಪಷ್ಟ ನಿರ್ಧಾರಕ್ಕೆ ಬರಲು ಸೂಚನೆ ನೀಡಿದರು.

ಎರಡು ಗುಂಪಿನವರು ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು, ಪ್ರತಿದೂರು ದಾಖಲಿಸಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT