ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನಸಿಗೆ ಬಡತನ ಅಡ್ಡಿಯಾಗದು: ದೊರೈರಾಜ್‌

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ
Published 7 ಜುಲೈ 2024, 14:56 IST
Last Updated 7 ಜುಲೈ 2024, 14:56 IST
ಅಕ್ಷರ ಗಾತ್ರ

ತುಮಕೂರು: ಪ್ರಸ್ತುತ ಬೌದ್ಧಿಕ ಬಂಡವಾಳ ಜಗತ್ತನ್ನು ಆಳುತ್ತಿದ್ದು, ಎಲ್ಲರು ಶಿಕ್ಷಣವಂತರಾಗಬೇಕು ಎಂದು ಚಿಂತಕ ಕೆ.ದೊರೈರಾಜ್‌ ಸಲಹೆ ಮಾಡಿದರು.

ನಗರದಲ್ಲಿ ಭಾನುವಾರ ಸ್ಲಂ ಸಮಿತಿ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ  ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಕಾಲಘಟ್ಟದಲ್ಲಿ ಶಿಕ್ಷಣ ತುಂಬಾ ಮುಖ್ಯವಾಗಿದೆ. ಸ್ಲಮ್‌ ಜನರು ಆಸ್ತಿ, ಅಂತಸ್ತು ಮಾಡಿಲ್ಲ ಎಂದು ಎದೆಗುಂದಬೇಕಾಗಿಲ್ಲ ಆತ್ಮ ವಿಶ್ವಾಸ ನಮ್ಮ ದೊಡ್ಡ ಶಕ್ತಿ. ಇದರಿಂದ ನಾವು ಜಗತ್ತು ಗೆಲ್ಲಬೇಕು. ಸ್ಲಮ್‌ಗಳಲ್ಲಿ ಉನ್ನತ ವ್ಯಾಸಂಗಕ್ಕೆ ಹೋಗುವವರ ಪ್ರಮಾಣ ಕಡಿಮೆ. ಹಸಿವು, ಬಡತನ ನಮ್ಮ ಕನಸಿಗೆ ಎಂದಿಗೂ ಅಡ್ಡಿಯಾಗದು ಎಂದರು.

ತುಮಕೂರು ನಗರ ಠಾಣೆಯ ಸಬ್‍ ಇನ್‌ಸ್ಪೆಕ್ಟರ್‌ ದಿನೇಶ್‍ಕುಮಾರ್‌, ‘ಇಂದಿನ ಯುವ ಸಮೂಹ ಸಂವಿಧಾನದ ಆಶಯವನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗಬೇಕು. ಯಾವುದೇ ಮನುಷ್ಯ ಕನಿಷ್ಠ ಅಲ್ಲ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಇಟ್ಟುಕೊಂಡು ಮನಸ್ಸನ್ನು ಸಂಕುಚಿತಗೊಳಿಸಿಕೊಳ್ಳಬಾರದು. ವಿದ್ಯಾರ್ಥಿಗಳು ಸೈಬರ್‌ ಚಟುವಟಿಕೆ ಮತ್ತು ಮಾದಕ ದ್ರವ್ಯಗಳಿಂದ ದೂರವಿರಬೇಕು’ ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎನ್.ಆಂಜನಪ್ಪ, ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಎಇಇ ಚೇತನ್‍ಕುಮಾರ್, ಮುಖಂಡರಾದ ವಾಲೇಚಂದ್ರಯ್ಯ, ಲಕ್ಷ್ಮಿನರಸಿಂಹರಾಜು, ಪತ್ರಕರ್ತ ಎಸ್.ನಾಗಣ್ಣ, ಸ್ಲಂ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಪದಾಧಿಕಾರಿಗಳಾದ ಶಂಕ್ರಯ್ಯ, ಕಣ್ಣನ್, ಮಂಗಳಮ್ಮ, ಅನುಪಮಾ, ಪೂರ್ಣಿಮಾ, ತಿರುಮಲಯ್ಯ, ಕೃಷ್ಣಮೂರ್ತಿ, ಅರುಣ್‌ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT