ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತಿ ಮೇಲೆ ಉರುಳಿದ ಮರ: ವಿದ್ಯುತ್ ಸರಬರಾಜು ವ್ಯತ್ಯಯ

Published 22 ಮೇ 2024, 5:41 IST
Last Updated 22 ಮೇ 2024, 5:41 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನಲ್ಲಿ ಒಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಳೆ ಗಾಳಿಗೆ ಮರದ ರೆಂಬೆ, ಕೊಂಬೆಗಳು ಮುರಿದು ವಿದ್ಯುತ್ ತಂತಿ ತುಂಡಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ, ಪಂಪ್‌ಸೆಟ್‌ಗಳಿಗೆ ವಿದ್ಯುತ್ ಇಲ್ಲದೆ ನೀರಿಗಾಗಿ ಪರದಾಡುವಂತಾಗಿದೆ.

ತಾಲ್ಲೂಕಿನ ಬೆಸ್ಕಾಂ ಎಇಇ ನಿವೃತ್ತರಾಗಿ ಹಲವು ತಿಂಗಳು ಕಳೆದಿವೆ. ಆದರೆ ಕಾಯಂ ಎಂಜಿನಿಯರ್‌ಗಳ ನೇಮಕ ಮಾಡಿಲ್ಲ. ಸದ್ಯ ಪ್ರಭಾರವಾಗಿ ತುಮಕೂರಿನಿಂದಲೇ ಎಂಜಿನಿಯರ್ ಅನ್ನು ಕಳುಹಿಸಿದ್ದರೂ, ಸ್ಥಳೀಯವಾಗಿ ಪರಿಚಯ ಇಲ್ಲದೆ ಇರುವುದರಿಂದ ಯಾವುದಕ್ಕೆ ಆದ್ಯತೆ ನೀಡಬೇಕು ಎನ್ನುವುದು ಗೊತ್ತಾಗದೆ ಪರಿತಪಿಸುವಂತೆ ಆಗುತ್ತಿದೆ. ತಾತ್ಕಾಲಿಕವಾಗಿ ಗುಬ್ಬಿಯಿಂದ ವರ್ಗಾವಣೆಗೊಂಡಿದ್ದ ಹಾಗೂ ಬೇರೆಡೆ ಹೋಗಿದ್ದ ಸಿಬ್ಬಂದಿಯನ್ನು ಕರೆಸಿಕೊಂಡು ತುರ್ತು ಕ್ರಮಕ್ಕೆ ಇಲಾಖೆ ಮುಂದಾಗಿದ್ದರೂ, ಸಾರ್ವಜನಿಕರ ಪರದಾಟ ತಪ್ಪಿಲ್ಲ.

ಗ್ರಾಮೀಣ ಭಾಗದ ಹಲವೆಡೆ ಎರಡು, ಮೂರು ದಿನಗಳಾದರೂ ವಿದ್ಯುತ್  ಇಲ್ಲದೆ ತೀವ್ರ ಸಂಕಷ್ಟ ಎದುರಿಸುವಂತೆ ಆಗುತ್ತಿದೆ ಎಂದು ಬಸವರಾಜು ಬೇಸರ ವ್ಯಕ್ತಪಡಿಸಿದರು.

ರಸ್ತೆ ಬದಿ ಹಾಗೂ ತೋಟದ ಸಾಲುಗಳಲ್ಲಿ ಇರುವ ಮರ, ಗಿಡ ತೆರವುಗೊಳಿಸುವಂತೆ ಅನೇಕ ಬಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯದರ್ಶಿ ಲೋಕೇಶ್ ಹೇಳಿದರು.

ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಅಗತ್ಯವಿರುವೆಡೆ ಮರ ಗಿಡಗಳ ತೆರವಿಗೆ ಹೆಚ್ಚು ಸಿಬ್ಬಂದಿ ನಿಯೋಜಿಸಿ ತೆರವಿಗೆ ಕ್ರಮ ಕೈಗೊಂಡಿದ್ದೇವೆ. ಮಳೆ ಗಾಳಿಯಿಂದ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಎಲ್ಲವನ್ನು ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು.
ಗುರುರಾಜ್ ಬೆಸ್ಕಾಂ ಪ್ರಭಾರ ಎಇಇ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT