ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಧುಗಿರಿ |ಉತ್ತಮ ಮಳೆ-ತುಂಬಿ ಹರಿದ ಕೆರೆ, ಹಳ್ಳ

Published 19 ಮೇ 2024, 13:08 IST
Last Updated 19 ಮೇ 2024, 13:08 IST
ಅಕ್ಷರ ಗಾತ್ರ

ಮಧುಗಿರಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿ ಹಳ್ಳ ಮತ್ತು ಕೆರೆಗಳಿಗೆ ನೀರು ಬಂದಿದ್ದು, ರೈತರು ಸಂತಸಗೊಂಡಿದ್ದಾರೆ.

ತಾಲ್ಲೂಕಿನ ಕಳೆದ ಮೂರು ದಿನಗಳಿಂದ ಸುರಿದ ಸುರಿದ ಮಳೆ ಭೂಮಿಯನ್ನು ತಂಪಾಗಿಸಿದೆ. ಶನಿವಾರ ರಾತ್ರಿ ಸುರಿದ ಬಾರಿ‌ ಮಳೆಗೆ ಹಳ್ಳಗಳ ಮೂಲಕ ಕೆರೆಗಳಿಗೆ ನೀರು ಬಂದಿರುವುದರಿಂದ ರೈತರು ಸಂತಸಗೊಂಡು ಕುಣಿದು ಕುಪ್ಪಳಿಸಿದ್ದಾರೆ.

ಚೋಳೇನಹಳ್ಳಿ ಕೆರೆ, ಹೊಸಕೆರೆ, ರೆಡ್ಡಿಹಳ್ಳಿ ಹಾಗೂ ಹನುಮಂತಪುರ ಕೆರೆ ಸೇರಿದಂತೆ ಹಲವು ಕೆರೆಗಳಿಗೆ ನೀರು ಬಂದಿದೆ. ಕತ್ತಿರಾಜನಹಳ್ಳಿ, ನೀರಕಲ್ಲು, ಚೋಳೇನಹಳ್ಳಿ ಕೆರೆ ಹಳ್ಳಗಳ ಮೂಲಕ ಕೆರೆಗಳಿಗೆ ನೀರು ಬಂದಿರುವುದನ್ನು ಜನರು ವೀಕ್ಷಿಸಿದರು.

ಎರಡು ವರ್ಷಗಳ ನಂತರ ಮೊದಲ ಬಾರಿಗೆ ಹಳ್ಳಗಳಲ್ಲಿ ಮಳೆ ನೀರು ಹರಿಯುತ್ತಿರುವುದರಿಂದ ಜನರು ಸಂತಸಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT