ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದಿಂದ ಪ್ರಾದೇಶಿಕ ಅಸಮಾನತೆ: ತಿಪ್ಪೇರುದ್ರ ಸ್ವಾಮೀಜಿ ಅಸಮಾಧಾನ

Published 31 ಜನವರಿ 2024, 3:10 IST
Last Updated 31 ಜನವರಿ 2024, 3:10 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಸರ್ಕಾರ ಪ್ರಾದೇಶಿಕ ಅಸಮಾನತೆ ತೋರುತ್ತಿದೆ. ರಾಮ ಮಂದಿರ ಸೇರಿದಂತೆ ಭವ್ಯ ಸ್ಮಾರಕ, ಇತರೆ ಮಂದಿರಗಳನ್ನು ಉತ್ತರ ಭಾರತದಲ್ಲಿ ನಿರ್ಮಿಸಿ, ದಕ್ಷಿಣ ಭಾರತವನ್ನು ನಿರ್ಲಕ್ಷಿಸುತ್ತಿದೆ ಎಂದು ತುರುವೇಕೆರೆ ತಾಲ್ಲೂಕಿನ ಡಿ.ಕಲ್ಕೆರೆಯ ಅಲ್ಲಮ‌ಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ಇಲ್ಲಿ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಅಲ್ಲಮಪ್ರಭು ಸ್ಮಾರಕ ನಿರ್ಮಾಣ ಮಾಡಬೇಕು. ಸ್ಮಾರಕ ಸ್ಥಾವರ ಆಗಬಾರದು. ಅಲ್ಲಿ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳು ನಡೆಯಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಅಲ್ಲಮಪ್ರಭು ಅಭಿವೃದ್ಧಿ ನಿಗಮ ಅಥವಾ ಪ್ರಾಧಿಕಾರ ಸ್ಥಾಪಿಸಬೇಕು. ಮೀಸಲಾತಿಯಿಂದ ವಂಚಿತರಾಗುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಬೇಕು. ನಿರುದ್ಯೋಗಿಗಳ ಭವಿಷ್ಯಕ್ಕೆ ಆರ್ಥಿಕ ನೆರವು ನೀಡಬೇಕು. ಸರ್ಕಾರದಿಂದ ಪ್ರತಿ ವರ್ಷ ‘ಅಲ್ಲಮ ಶ್ರೀ’ ಪ್ರಶಸ್ತಿ ಪ್ರದಾನ ಮಾಡಬೇಕು. ಶರಣರ ವಚನಗಳ ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಮನವಿ ಮಾಡಿದರು.

ಬಸವಣ್ಣನವರನ್ನು‌ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿರುವುದು ಸ್ವಾಗತಾರ್ಹ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಸಂಪುಟದ ಕಾರ್ಯ ಶ್ಲಾಘನೀಯ ಎಂದರು.

ಶರಣ ತತ್ವ ಪ್ರಚಾರಕ ಗುರುನಾಥ್ ಪೂಜಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT