ಶನಿವಾರ, ಡಿಸೆಂಬರ್ 3, 2022
26 °C
ಕಟ್ಟಡದಲ್ಲಿ ಬೆಳೆದು ನಿಂತ ಗಿಡಗಳು, ದುರಸ್ತಿಗೆ ಸ್ಥಳೀಯ ಆಡಳಿತ ನಿರ್ಲಕ್ಷ್ಯ

ಹುಳಿಯಾರು: ಶಿಥಿಲಾವಸ್ಥೆ ತಲುಪಿದ ಶಾಲಾ ಕಟ್ಟಡ

ಆರ್.ಸಿ.ಮಹೇಶ್‌ Updated:

ಅಕ್ಷರ ಗಾತ್ರ : | |

Prajavani

ಹುಳಿಯಾರು: ಪಟ್ಟಣದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಕಟ್ಟಡ ಶಿಥಿಲಾವಾಸ್ಥೆ ತಲುಪಿದ್ದು ಇತಿಹಾಸದ ಕುರುಹೊಂದು ಕಣ್ಮರೆಯಾಗುವ ಅತಂಕ ಎದುರಾಗಿದೆ.

ಬ್ರಿಟೀಷರ ಕಾಲದಲ್ಲಿ ಕಟ್ಟಿದ ಕಟ್ಟಡ ಪಟ್ಟಣದ ಹೃದಯ ಭಾಗದಲ್ಲಿದೆ. ಸುಮಾರು 1884ರ ಅಸುಪಾಸಿನಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತಿರುವ ಕಟ್ಟಡ ಶಿಥಿಲಾವಸ್ಥೆ ಹಂತಕ್ಕೆ ಬಂದಿದೆ.

ತಾಲ್ಲೂಕು ಕಚೇರಿಯಾಗಿದ್ದ ಕಟ್ಟಡ: ಸುಮಾರು 140 ವರ್ಷಗಳ ಹಿಂದೆ ಹುಳಿಯಾರು ತಾಲ್ಲೂಕು ಕೇಂದ್ರವಾಗಿತ್ತು. ಚಿತ್ರದುರ್ಗ ಜಿಲ್ಲಾ ಕೇಂದ್ರದ ಅಧೀನಕ್ಕೆ ಒಳಪಟ್ಟು ಮುಖ್ಯ ಪಟ್ಟಣವಾಗಿತ್ತು. ಇದೇ ಕಟ್ಟಡ ತಾಲ್ಲೂಕು ಕಚೇರಿಯಾಗಿ ಮೆರೆದಿತ್ತು ಎಂಬುದಕ್ಕೆ ಇಂದಿಗೂ ಪುರಾವೆಗಳಿವೆ. ತಾಲ್ಲೂಕು ಕಚೇರಿಯಲ್ಲಿ ನೀಡುತ್ತಿದ್ದ ನೊಂದಣಿ ಪತ್ರ ಸೇರಿದಂತೆ ಕಟ್ಟಡದ ಮುಂಭಾಗದಲ್ಲಿ ಗೋಡೆಯ ಮೇಲೆ ಗಾರೆಯಿಂದ ದಿಂಡಿನಂತೆ ಕಾಣಿಸುತ್ತಿರುವ ನಾಮಫಲಕ ಸೂಕ್ಷ್ಮವಾಗಿ ಕಾಣಿಸುತ್ತಿದೆ. ನಂತರದ ವರ್ಷಗಳಲ್ಲಿ ಪೊಲೀಸ್‌ ಠಾಣೆ ಸೇರಿದಂತೆ ಇತರ ಕಚೇರಿಗಳು ಇದೇ ಕಟ್ಟಡದಲ್ಲಿ ಇದ್ದವು ಎಂಬುದು ಕೆಲವಡೆ ನಮೂದಾಗಿದೆ.

ಇಂತಹ ಇತಿಹಾಸ ಸಾರುವ ಕಟ್ಟಡ ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಯಾಗಿ ಮಾರ್ಪಟ್ಟಿತ್ತು. ಕಟ್ಟಡದೊಳಗೆ ಸಾಕಷ್ಟು ಕೊಠಡಿಗಳಿದ್ದು ತರಗತಿಗಳಾಗಿ ವಿಂಗಡಿಸಿ ಶಾಲೆ ನಡೆಸಲಾಗುತ್ತಿದೆ. ಬಹಳಷ್ಟು ವರ್ಷಗಳ ಕಟ್ಟಡವಾಗಿರುವುದರಿಂದ ಕಟ್ಟಡದ ಗೋಡೆ ಸೇರಿದಂತೆ ವಿವಿಧ ಕಡೆ ಸಸಿಗಳು ಬೆಳೆದು ಮರಗಳಾಗಿವೆ. ಅರಳಿ ಸೇರಿದಂತೆ ಬೇರೆ ಗಿಡಗಳ ಬೇರು ಕಟ್ಟಡ ಹೊಕ್ಕು ಶಿಥಿಲವಾಗುತ್ತಿದೆ. ಆಗಾಗ ಸುಣ್ಣ ಬಣ್ಣ ಕಾಣದೆ ಅವಸಾನವಾಗುತ್ತಿದೆ. ಕಟ್ಟಡದ ಬಗ್ಗೆ ಇಲ್ಲಿನ ಪಟ್ಟಣ ಪಂಚಾಯಿತಿಯಾಗಲಿ, ಕಾರ್ಯಕ್ಷೇತ್ರ ವಿಸ್ತರಿಸಿಕೊಂಡಿರುವ ಶಿಕ್ಷಣ ಇಲಾಖೆಯಾಗಲಿ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು