ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು | ರಾಷ್ಟ್ರೀಯ ಮಟ್ಟದ ಕೊಕ್ಕೊ ಕ್ರೀಡಾಕೂಟಕ್ಕೆ ಆಯ್ಕೆ

Published 24 ಜನವರಿ 2024, 6:53 IST
Last Updated 24 ಜನವರಿ 2024, 6:53 IST
ಅಕ್ಷರ ಗಾತ್ರ

ತುಮಕೂರು: ಶಾಲಾ ಮಟ್ಟದ ರಾಷ್ಟ್ರೀಯ ಕೊಕ್ಕೊ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ನಗರದ ಸರ್ವೋದಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.

ಜಾರ್ಖಂಡ್‍ನ ರಾಂಚಿಯಲ್ಲಿ ಜ. 31ರಿಂದ ಫೆ. 4ರ ವರಗೆ 14 ವರ್ಷದ ವಯೋಮಿತಿ ಒಳಗಿನ ಬಾಲಕ, ಬಾಲಕಿಯರ 67ನೇ ರಾಷ್ಟ್ರೀಯ ಶಾಲಾ ಕೊಕ್ಕೊ ಕ್ರೀಡಾಕೂಟ ನಡೆಯಲಿದೆ. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸೋಮವಾರ ಬೀಳ್ಕೊಡಲಾಯಿತು.

ಬಾಲಕರ ತಂಡದಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಜಿ.ಎಚ್.ಹೇಮಸಾಗರ್, ಸುಲೈಮಾನ್ ಉಲ್ಲಾ ಖಾನ್, ಟಿ.ಆರ್.ಸುಹಾಸ್‍ಗೌಡ, ಟಿ.ಜೆ.ಯಶ್ವಂತ, ವಿ.ಜಿರಂಜೀವಿ, ಕುಣಿಗಲ್‍ ಮಹಾತ್ಮಗಾಂಧಿ ಪ್ರೌಢಶಾಲೆ ಕೆ.ಎಸ್.ಪ್ರಸನ್ನಕುಮಾರ್, ಬಾಲಕಿಯರ ವಿಭಾಗದಲ್ಲಿ ವಿಜಯಲಕ್ಷ್ಮಿ, ಬಿ.ಮುಬೀನ, ಸುಧಾ, ವಿ.ಲಾವಣ್ಯ, ಡಿ.ಕೆ.ಅಮೂಲ್ಯ ಹಾಗೂ ಇತರೆ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಬಾಲಕರ ತಂಡದ ಮ್ಯಾನೇಜರ್ ಹಾಗೂ ಸರ್ವೋದಯ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಶಿಕ್ಷಕ ವೈ.ರಮೇಶ್, ‘ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಮಕ್ಕಳಿಗೆ ಹತ್ತು ದಿನಗಳ ಕಾಲ ತರಬೇತಿ ನೀಡಲಾಯಿತು. ತರಬೇತಿ ಸಮಯದಲ್ಲಿ ವಿವಿಧ ತಂತ್ರಗಾರಿಕೆ ಹೇಳಿ ಕೊಡಲಾಗಿದೆ. ರಾಜ್ಯದ ಮಕ್ಕಳು ಉತ್ತಮ ಪ್ರದರ್ಶನ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಷ್ಟ್ರೀಯ ಕ್ರೀಡಾಕೂಟಕ್ಕೆ ತೆರಳುತ್ತಿರುವ ಮಕ್ಕಳು ಉತ್ತಮ ಪ್ರದರ್ಶನ ನೀಡಿ, ರಾಜ್ಯ, ಜಿಲ್ಲೆಗೆ ಕೀರ್ತಿ ತರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೂರ್ಯಕಲಾ ಶುಭ ಹಾರೈಸಿದರು.

ಸರ್ವೋದಯ ಪ್ರೌಢಶಾಲೆ ಮುಖ್ಯೋಪಾಧ್ಯಾಯ ನಾಗೇಶ್, ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಸವಿತ, ಸುಧೀಂದ್ರ, ಇಸಿಒ ಚಂದ್ರಣ್ಣ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT