ಭಾನುವಾರ, ನವೆಂಬರ್ 27, 2022
26 °C

ರೇಷ್ಮೆ ಕೃಷಿ ಲಾಭದಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕಳೆದ ವರ್ಷ ಕನಿಷ್ಠ 1 ಸಾವಿರ ಹೆಕ್ಟೇರ್ ರೇಷ್ಮೆ ಬೆಳೆ ವಿಸ್ತರಣೆಯ ಗುರಿ ನಿಗದಿಪಡಿಸಿದ್ದು, ಇಲಾಖೆಯಿಂದ ಜಿಲ್ಲೆಯಲ್ಲಿ 1,125 ಹೆಕ್ಟೇರ್ ವಿಸ್ತರಣೆ ಮಾಡಲಾಗಿದೆ. 1 ಸಾವಿರ ಬೆಳೆಗಾರರು ಹೊಸದಾಗಿ ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ರೇಷ್ಮೆ ಇಲಾಖೆ ಉಪ ನಿರ್ದೇಶಕ ವೈ.ಕೆ. ಬಾಲಕೃಷ್ಣಪ್ಪ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ತಾಲ್ಲೂಕು ಅಮೃತ ರೇಷ್ಮೆ ಉತ್ಪಾದಕರ ಸಂಸ್ಥೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

‘ಪ್ರಸಕ್ತ ಸಾಲಿನಲ್ಲಿ 1,500 ಹೆಕ್ಟೇರ್ ರೇಷ್ಮೆ ವಿಸ್ತರಣೆಯ ಗುರಿ ನೀಡಿದ್ದು, ಈಗಾಗಲೇ 950‌ ಹೆಕ್ಟೇರ್ ಗುರಿ‌ ಸಾಧಿಸಲಾಗಿದೆ. ಒಂದು ಹೆಕ್ಟೇರ್ ಪ್ರದೇಶದಲ್ಲಿ 800 ಕೆ.ಜಿ ರೇಷ್ಮೆ ಗೂಡು ಬೆಳೆಯಲಾಗುತ್ತಿದೆ. ಇದೇ ವಾತಾವರಣದಲ್ಲಿ ಗರಿಷ್ಠ 1 ಸಾವಿರ ಕೆ.ಜಿ ಗೂಡು ಬೆಳೆಯುವ ಎಲ್ಲ ತಾಂತ್ರಿಕತೆ ನಮ್ಮಲ್ಲಿದೆ. ಇದನ್ನು ರೈತರು ಬಳಸಿಕೊಳ್ಳಬೇಕು’ ಎಂದರು.

ನಬಾರ್ಡ್‌ ಡಿಜಿಎಂ ಕೀರ್ತಿಪ್ರಭಾ, ‘ರೈತರು ಬೆಳೆಯಲ್ಲಿ ಉತ್ತಮ ಲಾಭ ಪಡೆದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಸಂಘದ ಬೆಳವಣಿಗೆಯ ದೃಷ್ಟಿಯಿಂದ ಎಲ್ಲ ಬೆಳೆಗಾರರು ಷೇರುದಾರರಾಗುವ ಮೂಲಕ ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಸಲಹೆ ಮಾಡಿದರು.

ಕೋಲಾರ ಕೃಷಿ ವಿಜ್ಞಾನ ಕೇಂದ್ರದ ಡಾ.ಕೆ.ಆರ್. ಶಶಿಧರ್‌, ಹಿಪ್ಪುನೇರಳೆ ಗಿಡದ ಕೀಟ ಬಾಧೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆ ಅಧ್ಯಕ್ಷ ಎಚ್. ರಮೇಶ್, ಉಪಾಧ್ಯಕ್ಷ ರಾಜಕುಮಾರ ಉಪಸ್ಥಿತರಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು