ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾವಗಡ| ಶನೈಶ್ಚರ ದೇಗುಲಕ್ಕೆ ಭಕ್ತರ ದಂಡು

Published 18 ಜೂನ್ 2023, 11:33 IST
Last Updated 18 ಜೂನ್ 2023, 11:33 IST
ಅಕ್ಷರ ಗಾತ್ರ

ಪಾವಗಡ: ‘ಶಕ್ತಿ’ ಯೋಜನೆಯಡಿ ಉಚಿತ ಬಸ್ ಪ್ರಯಾಣವಿದ್ದ ಕಾರಣ ಶನಿವಾರ ಪಟ್ಟಣದ ಶನೈಶ್ಚರ ದೇಗುಲಕ್ಕೆ ಮಹಿಳೆಯರು ತಂಡೋಪ ತಂಡವಾಗಿ ಭೇಟಿ ನೀಡಿದ್ದರು.

ಪ್ರತಿ ಶನಿವಾರ 4ರಿಂದ 5 ಸಾವಿರ ಭಕ್ತರು ದೇಗುಲದಲ್ಲಿ ದರ್ಶನ ಪಡೆಯುತ್ತಿದ್ದರು. ಆದರೆ ಈ ವಾರ 10 ಸಾವಿರಕ್ಕೂ ಹೆಚ್ಚಿನ ಭಕ್ತರು ದರ್ಶನ ಪಡೆದಿದ್ದಾರೆ.

ಬೆಳಗಿನ ಜಾವದಿಂದಲೇ ತುಮಕೂರು, ಬೆಂಗಳೂರು, ಚಿತ್ರದುರ್ಗ ಕಡೆಯಿಂದ ಬಸ್‌ಗಳಲ್ಲಿ ಸಾಲು ಸಾಲು ಮಹಿಳೆಯರು ಬಂದರು.

ಪ್ರತಿ ಶನಿವಾರ 2 ಗಂಟೆಗೆ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿತ್ತು. ಆದರೆ ಈ ವಾರ 5 ಗಂಟೆಯಾದರೂ ಸರದಿಯಲ್ಲಿ ನಿಂತವರ ಸಂಖ್ಯೆ ಕಡಿಮೆಯಾಗಿರಲಿಲ್ಲ. ಹೆಚ್ಚಿನ ಸಂಖ್ಯೆಯ ಕೊಠಡಿಗಳಲ್ಲೂ ಭಕ್ತರು ತಂಗಿದ್ದಾರೆ ಎಂದು ದೇಗುಲ ಸಮಿತಿಯವರು ಮಾಹಿತಿ ನೀಡಿದರು.

ಬಸ್ ನಿಲ್ದಾಣದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿತ್ತು. ವಿದ್ಯಾರ್ಥಿಗಳು, ನೌಕರರು, ಇತರೆಡೆಯಿಂದ ಪಟ್ಟಣ, ಗ್ರಾಮಗಳಿಗೆ, ಪಟ್ಟಣದಿಂದ ತೆರಳಲು ಹರಸಾಹಸ ಪಟ್ಟರು. ಬಸ್‌ನಲ್ಲಿ ಕಿಕ್ಕಿರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT